ಗುರುವಾರ, ಅಕ್ಟೋಬರ್ 26, 2023

ಅಡಿಕೆ ಸಿಪ್ಪೆ ಅತ್ಯುತ್ತಮ ಶಬ್ದ ನಿರೋಧಕ

Arecanut

ಅಡಿಕೆ ಬೆಳೆಗಾರರಿಗೆ ಮತ್ತೊಂದು ಸಿಹಿ ಸುದ್ದಿ ಇದೆ. ಅಡಿಕೆಯ ವಿವಿಧ ಬಳಕೆಯ ಬಗ್ಗೆ ಈಗಾಗಲೇ ಹಲವು ಪ್ರಯತ್ನ ನಡೆಯುತ್ತಿದೆ. ಇದೀಗ ಅಡಿಕೆ ಸಿಪ್ಪೆಯ ಬಳಕೆಯಲ್ಲಿ ಇನ್ನೊಂದು ಸಂಶೋಧನಾ ವರದಿ ಬಹಿರಂಗವಾಗಿದೆ. ಶಬ್ದಗಳನ್ನು ತಡೆಯುವಲ್ಲಿಯೂ ಅಡಿಕೆ ಸಿಪ್ಪೆ ಪರಿಣಾಮಕಾರಿಯಾಗಿದೆ ಎಂಬುದನ್ನು ಸುರತ್ಕಲ್ನ ನ್ಯಾಷನಲ್ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಕರ್ನಾಟಕ (NITK) ನಡೆಸಿದ ಸಂಶೋಧನೆಯಿಂದ ತಿಳಿದುಬಂದಿದೆ.

ಅಡಿಕೆ ಬೆಳೆಗಾರರು ಅಡಿಕೆಯ ಸುಲಿದ ನಂತರ ಸಿಪ್ಪೆಯನ್ನು ತ್ಯಾಜ್ಯವಾಗಿ ಬಳಕೆ ಮಾಡುತ್ತಾರೆ. ಅನೇಕರು ಬೆಂಕಿ ಹಾಕಿದರೆ, ಕೆಲವರು ಗೊಬ್ಬರವಾಗಿ ಬಳಕೆ ಮಾಡುತ್ತಾರೆ. ಗೊಬ್ಬರವಾಗಿ ಬಳಕೆ ಮಾಡುವಾಗಲೂ ಹಲವು ವಿಧಾನಗಳನ್ನು ಅನುಸರಿಸಬೇಕಿದೆ. ಅಡಿಕೆ ಸಿಪ್ಪೆಯನ್ನು ಸೊಳ್ಳೆ ನಿಯಂತ್ರಕ ಕಾಯಿಲ್‌ ಆಗಿಯೂ ಬಳಕೆ ಮಾಡುವ ಪ್ರಯತ್ನ ನಡೆದಿದೆ. ಇದೀಗ ಇನ್ನೂ ಒಂದು ಅಧ್ಯಯನ ನಡೆದಿದೆ, ಆಡಿಟೋರಿಯಂ ಅಥವಾ ಮೀಟಿಂಗ್ ಹಾಲ್ನಲ್ಲಿ ಬರುವ ಅನಗತ್ಯ ಶಬ್ದಗಳನ್ನು ತಡೆಯುವಲ್ಲಿಯೂ ಅಡಿಕೆ ಸಿಪ್ಪೆ ಪರಿಣಾಮಕಾರಿಯಾಗಿದೆ ಎಂಬುದನ್ನು ಸುರತ್ಕಲ್ನ ನ್ಯಾಷನಲ್ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (NITK) ಸಂಶೋಧನಾ ವಿದ್ಯಾರ್ಥಿಗಳು ನಡೆಸಿದ ಸಂಶೋಧನೆಯಿಂದ ಬಹಿರಂಗವಾಗಿದೆ.

ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದ ಪ್ರೊ.ಪಿ.ಜಯರಾಜ್ ನೇತೃತ್ವದ ಸಂಶೋಧಕರು ಈ ಸಂಶೋಧನೆಯನ್ನು ನಡೆಸಿದ್ದಾರೆ. ಶಬ್ದ ನಿರೋಧಕ ಬೋರ್ಡ್ಗಳನ್ನು ರಚಿಸುವ ಮೂಲಕ ಶಬ್ದ ನಿರೋಧಕವಾಗಿ ಬಳಕೆ ಮಾಡಬಹುದು ಎಂದು ವರದಿಯಲ್ಲಿ ತಿಳಿಸಿದ್ದಾರೆ. ಅನಗತ್ಯ ಶಬ್ದವನ್ನು ನಿಯಂತ್ರಿಸಲು ಶಬ್ದ ಹೀರಿಕೊಳ್ಳುವ ವಸ್ತುಗಳನ್ನು ಬಳಸಲಾಗುತ್ತದೆ. ಈಗ ಪ್ಲಾಸ್ಟಿಕ್‌ ವಸ್ತುಗಳನ್ನು, ಮಡಕೆ, ಬೋರ್ಡ್‌ ಇತ್ಯಾದಿಗಳ ಬಳಕೆ ಮಾಡಲಾಗುತ್ತದೆ. ಆದರೆ ಅಡಿಕೆಯ ಸಿಪ್ಪೆ ಪರಿಸರ ಸ್ನೇಹಿಯೂ ಆಗಿದ್ದು, ಯಾವುದೇ ಸಮಸ್ಯೆ ಇಲ್ಲ ಎನ್ನುವುದು ವರದಿ.

“ಶಬ್ದ ಫಲಕಗಳನ್ನು ಹೆಚ್ಚು ಪರಿಸರ ಸ್ನೇಹಿ ಮತ್ತು ಜೈವಿಕ ಸಂಯೋಜನೆಯನ್ನಾಗಿ ಮಾಡಲು, ಸಂಸ್ಥೆಯ ವಿದ್ಯಾರ್ಥಿಗಳು ಮತ್ತು ಸಂಶೋಧಕರನ್ನು ಒಳಗೊಂಡ ತಂಡವು ಅಡಿಕೆ ಹೊಟ್ಟನ್ನು ಅನ್ವೇಷಿಸಲು ಪ್ರಾರಂಭಿಸಿತು. ಅದರಂತೆ ಫಲಿತಾಂಶವು ಸಕಾರಾತ್ಮಕವಾಗಿ ಬಂದಿದೆ” ಎಂದು ಜಯರಾಜ್ ಹೇಳಿದ್ದಾರೆ.

Follow the ಅಡಿಕೆ ಬೆಳೆಗಾರರ ಚಾನೆಲ್ channel on WhatsApp: https://whatsapp.com/channel/0029Va6CXv17dmeYrgQil235

ಮಂಗಳವಾರ, ಅಕ್ಟೋಬರ್ 24, 2023

ಅಡಿಕೆ ತೋಟ ಯಾವಾಗಲೂ ಆರೋಗ್ಯವಾಗಿರಬೇಕು ಎಂದರೆ ಈ ಕೆಲಸ ಮಾಡೋದು ಮರೆಯಬೇಡಿ

Agriculture: ಒಬ್ಬ ರೈತನಿಗೆ ಅಡಿಕೆ ತೋಟ ಇದ್ದರೆ ಹೆಚ್ಚಿನ ಲಾಭ ಗಳಿಸಲು ಎನ್ನುತ್ತಾರೆ. ರೈತನ 5 ಎಕರೆ ಅಡಿಕೆ ತೋಟವಿದ್ದರೆ ಆತನ ನಿವ್ವಳ ಆದಾಯ 10 ಲಕ್ಷ ರೂ. ಎಂದು ಪರಿಗಣಿಸ ಬಹುದು. ಹಾಗಿದ್ರೆ ಇದರ ಖರ್ಚು ಯಾವ ರೀತಿ ಇರುತ್ತೆ? ಖರ್ಚು ಎಂಬುದು ಆಯಾಯ ರೈತರ ಕೃಷಿ ವಿಧಾನದ ಮೇಲೆ ಅವಲಂಭಿಕೆ ಆಗಿರುತ್ತದೆ. ತೋಟ ವನ್ನು ಸರಿಯಾಗಿ ನಿರ್ವಹಣೆ ಮಾಡಿದ್ರೆ ಖರ್ಚು ಕಮ್ಮಿಯೆ ಎಂದು ಹೇಳಬಹುದು.ಅಡಿಕೆ ತೋಟಕ್ಕೆ ಸರಿಪ್ರಮಾಣದ ಮಣ್ಣು, ನೀರು, ಪೋಷಣೆ ಸಿಕ್ಕರೆ ಹೆಚ್ಚು ಆದಾಯ ಬೇರೆ ಯಾವ ಬೆಳೆಯಲ್ಲಿಯೂ ಬರಲು ಸಾಧ್ಯವೇ ಇಲ್ಲ.

ಏನು ಮಾಡಬೇಕು?

ಅಡಿಕೆ ತೋಟದಲ್ಲಿ ಹೆಚ್ಚಿನ ಫಸಲು ಸಿಗಬೇಕಾದರೆ ಸರಿಯಾದ ನೀರು ಪೂರೈಕೆ ಆಗಬೇಕು, ಗಾಳಿ, ಬೆಳಕು ಸರಿಯಾಗಿ ಬೀಳಬೇಕು. ಮುಖ್ಯವಾಗಿ ಅಲ್ಲೆ ಬೀಳುವ ಕಸ ಕಡ್ಡಿ, ಹಾಳೆ ಇತ್ಯಾದಿಗಳನ್ನು ಗೊಬ್ಬರವಾಗಿ ಮಣ್ಣಿನ ಸೇರುವಂತೆ ಮಾಡಬೇಕು. ರಸಾಯನಿಕ ಗೊಬ್ಬರ ಬಳಸಲೇ ಬಾರದು. ಸಾವಯವ ಗೊಬ್ಬರ ಹಾಕುವ ಮೂಲಕ ನಿಮ್ಮ ತೋಟವನ್ನು ಆರೋಗ್ಯ ಕರವಾಗಿ ಇಡಬಹುದಾಗಿದೆ.

ಹರಳು ಉದುರುವಿಕೆ ಯಾಕೆ?

ಕೆಲವು ತೋಟಗಳಲ್ಲಿ ನೀರಿನ ತೇವಾಂಶ ಹೆಚ್ಚಾದರೂ ಹರಳು ಉದುರುವಿಕೆ ಉಂಟಾಗುತ್ತದೆ. ತೋಟಗಳಲ್ಲಿ ಶೀತದ ವಾತಾವರಣ ದಿಂದ ಹರಳು ಉದುರುವ ಬಾಧೆ ಕಂಡು ಬರುತ್ತದೆ. ಒಂದು‌ ವೇಳೆ ಅಡಿಕೆ ಗಿಡದ ಎಲೆಗಳು ಹಳದಿ ಬಣಕ್ಕೆ ತಿರುಗಿದರೆ, ಕ್ಯಾಲ್ಸಿಯಂ ನೈಟ್ರೇಟ್ಆನ್ನು ನೀರಿಗೆ ಬೆರೆಸಿ ಸಿಂಪಡಿಸಬಹುದು. ಹರಳು ಉದುರುವಿಕೆಗೆ ನೀರು ಬಸಿಯದ ತೋಟಗಳಲ್ಲಿ ಕಾಲುವೆಗಳನ್ನು ಮಾಡಿ, ತೋಟದ ಸುತ್ತಲೂ ನಿಂತ ನೀರು ಕಾಲುವೆಗಳನ್ನು ಸ್ವಚ್ಚಗೊಳಿಸುವುದು ಮಾಡಬೇಕು.

ಇಳುವರಿ ಹೆಚ್ಚು.

ನೀವು ಅಡಿಕೆ ಗಿಡಗಳನ್ನು ಪ್ರೀತಿಯಿಂದ ನೋಡಿಕೊಳ್ಳುವುದು ಮುಖ್ಯ, ಅದ್ರೆ ಅಡಿಕೆ ಗಿಡಗಳು ಆರೋಗ್ಯ ವಾಗಿಡಲು ಗಿಡಕ್ಕೆ ಅನುಗುಣವಾದ ಪೋಷಕಾಂಶ ಗಳನ್ನು ನೀಡುವುದು. ಮನೆಯಲ್ಲಿಯೇ ಮಾಡಿದ ಗೊಬ್ಬರ ಹಾಕುವುದು.ನೀರು ನಿಲ್ಲದಂತೆ ನೋಡಿಕೊಳ್ಳುವುದು ಇತ್ಯಾದಿ ಮಾಡಿದ್ರೆ ಹೆಚ್ಚಿನ ಇಳುವರಿ ಕಾಣಲು ಸಾಧ್ಯ.

Follow the ಅಡಿಕೆ ಬೆಳೆಗಾರರ ಚಾನೆಲ್ channel on WhatsApp: https://whatsapp.com/channel/0029Va6CXv17dmeYrgQil235

ಭಾನುವಾರ, ಏಪ್ರಿಲ್ 2, 2023

ನಟಿ ಶೃತಿ ಕ್ಯಾಸನೂರು ನಾಟಿ ಅಡಿಕೆ ತೋಟ ಫುಲ್ ವೈರಲ್

ಕನ್ನಡ ಚಿತ್ರರಂಗ ಕಂಡ ಶ್ರೇಷ್ಠ ನಟಿಯರಲ್ಲಿ ಅಗ್ರಗಣ್ಯರಲ್ಲಿ ಒಬ್ಬರಾದ ನಟಿ ಶ್ರುತಿ ಅವರ ಬಗ್ಗೆ ನಾವು ಹೇಳಹೊರಟಿರುವುದು. ಭಾವನಾತ್ಮಕ ಪಾತ್ರಗಳನ್ನು ಇವರಿಗಿಂತ ಚೆನ್ನಾಗಿ ನಿರ್ವಹಿಸಬಲ್ಲ ನಟಿ ಇಡೀ ಭಾರತೀಯ ಚಿತ್ರರಂಗದಲ್ಲೇ ಇಲ್ಲ ಎನ್ನಬಹುದು. ಇವರು ಕೇವಲ ಕನ್ನಡ ಚಿತ್ರರಂಗ ಮಾತ್ರವಲ್ಲದೆ ತಮಿಳು, ತೆಲುಗು, ಮಲಯಾಳಂ ಚಿತ್ರರಂಗದಲ್ಲಿ ಕೂಡ ಕಾಣಿಸಿಕೊಂಡವರು. ಅಲ್ಲದೇ ರಾಜಕಾರಣದಲ್ಲೋ ತಮ್ಮದೇ ಆದ ಚಾಪು ಮೂಡಿಸಿದವರು. ಮಹಿಳೆಯಾಗಿ, ನಟಿಯಾಗಿ, ರಾಜಕಾರಣಿಯಾಗಿ, ಗೃಹಿಣಿಯಾಗಿರುವುದಲ್ಲದೇ ಈಗ ಕೃಷಿ ರಂಗದಲ್ಲೂ ತೊಡಗಿಸಿಕೊಂಡು ಅಡಿಕೆ ತೋಟ ಮಾಡಲು ಮುಂದಾಗಿದ್ದಾರೆ.
ಹೆಚ್ಚಿನ ಮಾಹಿತಿಗೆ:  ಕೆಜಿಎಫ್ ಯಶ್ ಅಡಿಕೆ ತೋಟ

ತಮ್ಮ ಜಮೀನಿನಲ್ಲಿ ಒಳ್ಳೆಯ ಬೆಳೆಮಾಡಬೇಕು ಅಂದುಕೊಂಡಿದ್ದ ಶೃತಿಯವರಿಗೆ ಅಪ್ಪು ಅವರು ಕ್ಯಾಸನೂರು ನಾಟಿ ತಳಿಯ ಅಡಿಕೆ ಬೆಳೆಯಲು ಸಲಹೆ ನೀಡಿದ್ದರಂತೆ. ತಂದೆ ಕೃಷ್ಣ ಅವರಿಗೂ ಇದೆ ಮನದಾಸೆಯಾಗಿತ್ತಂತೆ. ಇವರೆಲ್ಲರ ಸಲಹೆಯಂತೆ ಪತ್ರಕರ್ತ ಮಹಾಬಲೇಶ್ವರ ಅವರ ಸಲಹೆ ಮೆರೆಗೆ ಕ್ಯಾಸನೂರು ಅಡಿಕೆ ಸಸಿಗಳ ಬಗ್ಗೆ ವಿಚಾರಿಸಿ ಮಾಹಿತಿ ಕಲೆಹಾಕಿಕೊಂಡರು. ಅಧಿಕ ಇಳುವರಿ, ಸದೃಢ ಮರಗಳಾಗಿ ಬಾಳಿಕೆಬರಲು ಕ್ಯಾಸನೂರು ಅಡಿಕೆ ಸೂಕ್ತ ಎಂದು ಅರಿತುಕೊಂಡ ಕೋಡಲೇ ಕ್ಯಾಸನೂರು ಅಡಿಕೆ ಬೆಳೆಯುವ ಕ್ಯಾಸನೂರು ರಾಮಚಂದ್ರ ಕುಶೇನ್ ಇವರನ್ನ ದೂರವಾಣಿ ಮುಕಾಂತರ ಸಂಪರ್ಕಿಸಿ ಒಂದು ವರ್ಷ ಮೊದಲೇ ಅಡ್ವಾನ್ಸ್ ನೀಡಿ ಬುಕ್ ಮಾಡಿದ್ದರು. ಈಗ ಒಳ್ಳೆಯ ಗಿಡಗಳನ್ನು ತಂದು ನಾಟಿ ಮಾಡಿದ್ದಾರೆ.
ಇವರ ಪ್ರಮುಖ ಚಿತ್ರಗಳೆಂದರೆ ಗೌರಿ ಗಣೇಶ, ಅಕ್ಕ-ತಂಗಿ, ಕಲ್ಕಿ, ಗೌಡ್ರು, ಪುಟ್ಟಕ್ಕನ ಹೈವೇ ಇತ್ಯಾದಿ ಚಿತ್ರಗಳು ಅವರ ಸಿನಿ ಜೀವನದಲ್ಲಿ ಸಾಕಷ್ಟು ಮೆಚ್ಚುಗೆ ಪಡೆದ ಚಿತ್ರಗಳಾಗಿ ಮೂಡಿಬಂದಿದೆ.

ಕನ್ನಡದ ಒಂದು ಕಾಲದ ಟಾಪ್ ನಟಿ ಶ್ರುತಿ ಅವರ ನಿಜವಾದ ಹೆಸರು ಪ್ರಿಯದರ್ಶಿನಿ. ಮೂಲತಃ ಕಾರಾಂತಕದ ಹಾಸನ ಜಿಲ್ಲೆಯಲ್ಲಿ ಹುಟ್ಟಿದ ನಟಿ ಶ್ರುತಿ ರಂಗ ಭೂಮಿ ಯಲ್ಲಿ ಸಾಕಷ್ಟು ಕೆಲಸಗಳನ್ನು ಮಾಡಿ, ನಂತರ ಮಲಯಾಳಂ ಭಾಷೆಯ “ಸ್ವಂತಂ ಇನ್ನು ಕಾರುತಿ” ಸಿನಿಮಾದಲ್ಲಿ ಮೊದಲು ನಟನೆ ಮಾಡಿದರು. ಆ ನಂತರ ಆಸೆಗೊಬ್ಬ ಮೀಸೆಗೊಬ್ಬ ಚಿತ್ರದಲ್ಲಿ ಸಣ್ಣ ಪಾತ್ರ ಮಾಡಿದ್ದ ನಟಿ ಶ್ರುತಿ ಅವರ ಅದ್ಭುತ ನಟನೆಗೆ ಕರ್ನಾಟಕದ ಮನೆ ಮಾತಾದರು. ಆ ನಂತರ ಕನ್ನಡ, ತಮಿಳು, ತೆಲುಗು, ಮಲಯಾಳಂ ಸೇರಿ ಸುಮಾರು ೧೫೦ ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟನೆ ಮಾಡಿದ್ದಾರೆ ಶ್ರುತಿ. ಸದ್ಯ ಮಗಳ ಜೊತೆ ಮೈಸೂರಿನ ಹತ್ತಿರ ಇರುವ ತಮ್ಮ ತೋಟದಲ್ಲಿ ವಾಸವಾಗಿದ್ದಾರೆ.

ನಟಿ ಶ್ರುತಿ ಅವರು ಕರೋನ ಲಾಕ್ ಡೌನ್ ಆದ ಸಮಯದಲ್ಲಿ ಸಿನಿಮಾ ಚಿತ್ರೀಕರಣ ಇಲ್ಲದ ಕಾರಣ, ತಮ್ಮ ಮಗಳ ಜೊತೆ ಮೈಸೂರಿನ ಹತ್ತಿರ ಇರುವ ತಮ್ಮ 25 ಎಕರೆ ತೋಟದಲ್ಲಿ ವಾಸವಾಗಿದ್ದರು. ತಮ್ಮ ತೋಟದಲ್ಲಿ ಪರಿಸರ ಸ್ನೇಹಿ ಮನೆಯನ್ನು ಸಿಮೆಂಟ್ ಬಳಸದೆ, ಕೇವಲ ಕಲ್ಲು ಮಣ್ಣಿನಿಂದ ಸುಂದರವಾದ ಮನೆಯೊಂದನ್ನು ಕಟ್ಟಿದ್ದಾರೆ.

ಯಾವಾಗಲೂ ಸೋಶಿಯಲ್ ಮೀಡಿಯಾದಲ್ಲಿ ಬಹಳ ಆಕ್ಟಿವ್ ಇರುವ ಶೃತಿ ಅವರು ತಮ್ಮ ಅಭಿಮಾನಿಗಳೊಂದಿಗೆ ಅನೇಕ ವಿಡಿಯೋ ಫೋಟೋ ತುಣುಕುಗಳನ್ನು ಹಂಚಿಕೊಳ್ಳುತ್ತಾರೆ. ಹಾಗೇ ಶೃತಿಯವರು ತಾವು ತಮ್ಮ ತೋಟದಲ್ಲಿ ನಿರ್ಮಿಸಿದ ಮನೆಯ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ ಹೀಗೆ ಬರೆದು ಕೊಂಡಿದ್ದಾರೆ. “ಪರಿಸರ ಸ್ನೇಹಿ ಮನೆ ಇದು, ಸಿಮೆಂಟ್ ಬಳಸದೆ ಗೋಡೆಗೆ ಕೇವಲ ಕಲ್ಲು, ಮಣ್ಣು, ಚಾವಣಿಗೆ ಬಿದಿರು, ತೆಂಗಿನಗರಿ. ಇದಕ್ಕೆ ಇಂಜಿನಿಯರ್ರು ನಾನೇ, ಮೇಸ್ತ್ರಿನು ನಾನೇ ” ಎಂದು ಬರೆದಿದ್ದಾರೆ.
ಕೃಷಿಯಲ್ಲಿ ಆಸಕ್ತಿ ಇರುವ ಅವರು ಸಾವಯುವ ಕೃಷಿ ಮೂಲಕ ತಮ್ಮ ತೋಟದಲ್ಲಿ ಅನೇಕ ತರಕಾರಿ ಬೆಳೆಸಿದ್ದಾರೆ. ಈ ತೋಟದಲ್ಲಿ ಕೇವಲ ಮಹಿಳೆಯರೇ ಹೆಚ್ಚು ಕೆಲಸ ಮಾಡುತ್ತಾರೆ. ಅವರು ತಮ್ಮ ತೋಟದಲ್ಲಿ ಬೆಳೆದ ಮೊದಲ ಬೆಳೆಗೆ ತುಂಬಾ ಖುಷಿಗೊಂಡರು. ಹಾಗೂ ಅದರ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಬೆಳೆದಿದ್ದು ಸ್ವಲ್ಪವೇ ಆದರೂ ಆಗಿರುವ ಖುಷಿ ಮಾತ್ರ ಟನ್ ಗಟ್ಟಲೇ ಎಂದಿದ್ದಾರೆ.

http://surl.li/gbyap

Follow the ಅಡಿಕೆ ಬೆಳೆಗಾರರ ಚಾನೆಲ್ channel on WhatsApp: https://whatsapp.com/channel/0029Va6CXv17dmeYrgQil235

ಶನಿವಾರ, ಮಾರ್ಚ್ 11, 2023

ಅಡಿಕೆ ಕೃಷಿ…ಕೃಷಿ ಕ್ಷೇತ್ರದಲ್ಲಿ ಕಾಣುತ್ತಿದೆ ಮಹತ್ತರ ಬದಲಾವಣೆ!! ಕೃಷಿಕರು ಮೆಚ್ಚಿದ ಇದೊಂದು ತಳಿ-ಬೆಳೆಸುವುದು ಗೊತ್ತಾ!?

ಕೃಷಿ ಕ್ಷೇತ್ರದಲ್ಲಿ ದಿನಕ್ಕೊಂದು ಬದಲಾವಣೆ, ಹೊಸ ಹೊಸ ಪ್ರಯೋಗ, ಕೃಷಿ ವಿಜ್ಞಾನಿಗಳ ಅಧ್ಯಯನ, ಹೊಸ ಹೊಸ ತಳಿಗಳ ಪರಿಚಯ, ಸಾವಯವ-ರಸಾಯನಿಕ, ಇಳುವರಿ ಹೀಗೆ ಎಲ್ಲವೂ ಕಂಡು ಬರುತ್ತಿದೆ. ಈ ನಡುವೆ ಲಾಕ್ ಡೌನ್ ಬಳಿಕ ಪಟ್ಟಣಗಳಲ್ಲಿ ಬದುಕು ಕಟ್ಟಿಕೊಂಡ ಮಂದಿಯೂ ಹಳ್ಳಿಯಲ್ಲಿ ಕೃಷಿಗೆ ಮನಸೋತಿದ್ದು, ಪ್ರಮುಖವಾಗಿ ಅಡಿಕೆ ಬೆಳೆಗೆ ಮನಸೋತು ಅಡಿಕೆ ಗಿಡಗಳನ್ನು ಬೆಳೆಯುತ್ತಿರುವುದು ವಾಸ್ತವ.
ಕಳೆದ ಕೆಲ ವರ್ಷಗಳ ಹಿಂದೆ ಸಾಗರ ಸಮೀಪದ ಯುವಕರೊಬ್ಬರ ಅಡಿಕೆ ಕೃಷಿ ತೋಟ, ಅದರ ಬೆನ್ನಲ್ಲೇ ಸೊರಬ ಸಮೀಪದ ಲೇಪಾಕ್ಷದ ಯುವ ಉದ್ಯಮಿ ಒಬ್ಬರ ಕೃಷಿ ತೋಟದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ, ಮಾಧ್ಯಮದಲ್ಲಿ ಪ್ರಸಾರವಾಗಿ ಇನ್ನಷ್ಟು ಯುವಕರಲ್ಲಿ ಕೃಷಿಯ ಬಗ್ಗೆ ಅರಿವು ಮೂಡಿಸಿದ್ದು, ತೋಟದ ಕೆಲಸ ಲೇಸು ಎನ್ನುವಂತೆ ಮಾಡಿದೆ.
ಹೆಚ್ಚಿನ ಮಾಹಿತಿಗಾಗಿ ನೋಡಿ 👉 ಕ್ಯಾಸನೂರು ಅಡಿಕೆ ಪ್ರಸಿದ್ಧ ಅಡಿಕೆ
ಒಂದು ಕಾಲದಲ್ಲಿ ಮನೆಯಲ್ಲೇ ಇದ್ದು ತೋಟ ನೋಡಿಕೊಳ್ಳುವ ಯುವಕ ಎಂದರೆ ತಾತ್ಸಾರ ಭಾವದಿಂದ ಕಾಣುತ್ತಿದ್ದ ಮಂದಿ ಇಂದು ಪೇಟೆ ಪಟ್ಟಣಗಳಲ್ಲಿ ದುಡಿಯುವ ಯುವಕರ ಬಗ್ಗೆ ತಾತ್ಸಾರ ಮೂಡಿಸುವಂತೆ ಮಾಡಿದ್ದು, ಆ ಮಟ್ಟಕ್ಕೆ ಲಾಕ್ ಡೌನ್ ಬಳಿಕ ಅಡಿಕೆ-ತೋಟದ ಕೃಷಿ ಜನತೆಗೆ ಹಿಡಿಸಿದೆ. ಅಡಿಕೆ ಬೆಳೆದು ಬಂಗಾರದ ಜೀವನ ಕಟ್ಟಿಕೊಂಡ ಹಲವರು ನಮ್ಮ ನಡುವೆ ಇದ್ದು,ಅಡಿಕೆ ಕೃಷಿಯನ್ನು ಕಂದನಂತೆ ಪ್ರೀತಿಸುತ್ತಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ 👉 ಅಡಿಕೆ ಸಸಿಯಲ್ಲೂ ನಡೆಯುತ್ತೆ ಮೋಸ
ಇಂತಹ ಯುವ ಕೃಷಿಕರಿಗಾಗಿ ಇಲ್ಲೊಂದು ಮಾಹಿತಿ-ಅರಿವು ಮೂಡಿಸುವ ಬಗ್ಗೆ ವಿವರಿಸಲಾಗಿದ್ದು, ಹಲವು ಬಗೆಯ ತಳಿಗಳಲ್ಲಿ ಆಯಾ ಪ್ರದೇಶಗಳಿಗೆ ಯಾವ ತಳಿಗಳು ಸೂಕ್ತ ಎನ್ನುವ ವಿಚಾರವನ್ನು ಪ್ರಗತಿಪರ ಕೃಷಿಕರೆಂದು ಹಲವಾರು ಸನ್ಮಾನ-ಪುರಸ್ಕಾರಗಳನ್ನು ಪಡೆದ ಕೃಷಿಕರಿಂದ ತಿಳಿದು, ಆ ಮಾಹಿತಿಯನ್ನು ಇಲ್ಲಿ ವಿಸ್ತಾರವಾಗಿ ಬರೆಯಲಾಗಿದೆ. ಇಂದಿನ ಕಾಲದಲ್ಲಿ ಮಲೆನಾಡು ಭಾಗದಲ್ಲಿ ಕ್ಯಾಸನೂರು ಸೀಮೆ ತಳಿ ಕೆಳದಿ, ಕ್ಯಾಸನೂರು, ಉಮಟೆಗದ್ದೆ ಊರುಗಳಲ್ಲಿ ಈ ನಾಟಿ ತೋಟ ವಿಸ್ತಾರವಾಗಿದೆ. ಕರಾವಳಿ ಪ್ರದೇಶಗಳಲ್ಲಿ ಊರ ಅಡಿಕೆ, ಮಂಗಲ, ಇಂಟರ್ಸ್ಟ್ ಮಂಗಲ, ರತ್ನಗಿರಿ, ಮೋಹಿತ್ ನಗರ ಹೀಗೆ ಕೆಲವೊಂದು ತಳಿಗಳು ಹೆಚ್ಚು ಚಿರಪರಿಚಿತವಾಗಿದೆ.
ಇವುಗಳಲ್ಲಿ ರೋಗಗಳೇ ಬಾರದ ಕ್ಯಾಸನೂರು ನಾಟಿ ತಳಿಯು ಹೆಚ್ಚು ಫಸಲು ನೀಡುವ ಹಾಗೂ ಅತೀ ಕಡಿಮೆ ಅವಧಿ, ಅಡಿಕೆಯೂ ಭಾರವಿರುತ್ತದೆ ಎನ್ನುವ ಅಭಿಪ್ರಾಯ ಕೃಷಿಕರಲ್ಲಿದ್ದು, ಇದನ್ನು ನೆಡುವ ಕ್ರಮಗಳಲ್ಲಿ ಕೆಲವೊಂದು ಸೂಕ್ಷ್ಮತೆಯ ಅರಿವು ಬೇಕಾಗುತ್ತದೆ.ಮಣ್ಣು ಅಗತೆ ಮಾಡುವ ಕ್ರಮದಿಂದ ಹಿಡಿದು ಗುಂಡಿ, ಅದರ ಸುತ್ತಳತೆ,ಮಳೆ ನೀರು ಹಾದುಹೋಗಲು ವ್ಯವಸ್ಥೆ ಹೀಗೆ ಹತ್ತು ಹಲವು ಕ್ರಮಗಳನ್ನೂ ಮಾಡದಿದ್ದಾರು ಕಳೆ ನಿಯಂತ್ರಿಸಿ ಸಾಧಾರಣ ಕೃಷಿಯಲ್ಲೂ ಅಧಿಕ ಇಳುವರಿ ಗಳಿಸಿ ಮೆಚ್ಚಿಕೊಂಡಿದ್ದಾರೆ.
ಗುಡ್ಡಗಾಡು ಪ್ರದೇಶವನ್ನು ಅಗೆದು ಸಮತಟ್ಟು ಮಾಡಿ ಅಲ್ಲಿ ನೆಡುವ ಗಿಡಗಳಲ್ಲಿ ಕ್ಯಾಸನೂರು ನಾಟಿ ತಳಿ ಮೊದಲ ಸ್ಥಾನದಲ್ಲಿದ್ದು, ಉಳಿದಂತೆ ಪ್ರಸ್ತುತ ಇರುವ ತೋಟದಲ್ಲೇ ಎಡೆ ಎಡೆಯಲ್ಲಿ ಕ್ಯಾಸನೂರು ಪಕ್ಕದ ಉಮಟೆಗದ್ದೆ ಗಿಡಗಳನ್ನು ನೆಡಲಾಗುತ್ತಿದೆ. ಕೆಲವೆಡೆ ಕೆಳದಿಯ ಗಿಡವನ್ನು ನೆಡಲಾಗುತ್ತಿದೆ. ಯಾವ ಕಾರಣಕ್ಕೂ ಹೈಬ್ರಿಡ್, ರತ್ನ ಮಹಲ್, ತೀರ್ಥಹಳಿ, ಭೀಮಸಮುದ್ರ, ಇತ್ಯಾದಿ ಗಿಡಗಳನ್ನ ನೆಡಲೇ ಬೇಡಿ. ಬಿಸಿಲು-ನೆರಳು ಎರಡೂ ಸರಿಸಮಾನಾಗಿ ಗಿಡಗಳಿಗೆ ಅಗತ್ಯವಾಗಿದ್ದು, ಗಿಡಗಳ ಬೆಳವಣಿಗೆ ಹಾಗೂ ಅದರ ಆರೈಕೆಯಲ್ಲಿ ಹೆಚ್ಚಿನ ಉತ್ಸಾಹ ತೋರಿದಾಗ ಫಸಲು ಉತ್ತಮವಾಗಿ ಸಿಗುತ್ತದೆ ಎನ್ನುತ್ತಾರೆ ಸಂದರ್ಶಸಿದ ಕೃಷಿಕರು.

ಅಡಿಕೆ ಕೃಷಿ ಮಾರ್ಗದರ್ಶಕರು - ಮಂಜುನಾಥ್ ಹೆಗಡೆ.

Follow the ಅಡಿಕೆ ಬೆಳೆಗಾರರ ಚಾನೆಲ್ channel on WhatsApp: https://whatsapp.com/channel/0029Va6CXv17dmeYrgQil235

ಮಂಗಳವಾರ, ಜೂನ್ 14, 2022

ಅಡಿಕೆ ಸಸಿ ನೆಡುವಾಗ ಬಾಳೆ ನೆಟ್ಟರೆ ಏನು ಪರಿಣಾಮ?

ಅಡಿಕೆ ತೋಟದಲ್ಲಿ ಅನುತ್ಪಾದಕ ಮರಗಳ ಪ್ರಮಾಣ ಹೆಚ್ಚಳವಾಗಲು ಮುಖ್ಯ ಕಾರಣ ಸ್ಪರ್ಧೆ ಕೊಡುವ ಮಿಶ್ರ ಬೆಳೆ. ಅಡಿಕೆ ಸಸಿಗಳಲ್ಲಿ ಅಸಮತೋಲನ ಬೆಳವಣಿಗೆ, ಸಣಕಲು ಸಸ್ಯ , ಎಲೆಗಳು ಕಡಿಮೆ ಯಾಗುವುದು ಸರಿಯಾಗಿ ಬೆಳವಣಿಗೆ ಹೊಂದರೆ ಇರುವುದು,ಬಿಸಿಲಿನ ತಾಪಕ್ಕೆ ಹೊಂದಿಕೊಳ್ಳುವ ಶಕ್ತಿ ಕಡಿಮೆಯಾಗುವುದು ಎಲ್ಲದಕ್ಕೂ ಕಾರಣ ಸೂಕ್ತವಲ್ಲದ ಮಿಶ್ರ ಬೆಳೆ. ಮೊದಲ ಒಂದೆರಡು ವರ್ಷ ಮಿಶ್ರ ಬೆಳೆಯಾಗಿ ಬಾಳೆ ಬೆಳೆಯುವುದು.

ಸಾಮಾನ್ಯವಾಗಿ ಹೆಚ್ಚಿನವರು ಅಡಿಕೆ ಸಸಿ ನೆಡುವಾಗ ಬಾಳೆ ನಾಟಿ ಮಾಡಲು ಬಯಸುತ್ತಾರೆ.

ಬಾಳೆ ಬೆಳೆದರೆ ಅಡಿಕೆ ತೋಟದ ಸ್ವಲ್ಪ ಖರ್ಚು ಹುಟ್ಟುತ್ತದೆ ಎಂಬುದು ಸರಿಯಾದರೂ ಅಡಿಕೆ ತೋಟವೇ ಮುಂದೆ ಹಾಳಾಗುತ್ತದೆ..

ಅಡಿಕೆ ಸಸಿ ನಾಟಿ ಮಾಡುವ ಸಮಯದಲ್ಲಿ ಬಾಳೆ ಬೆಳೆಸಿದರೆ ಅಡಿಕೆ ತೋಟದಲ್ಲಿ ಅನುತ್ಪಾದಕ ಮರಗಳ ಸಂಖ್ಯೆ ಹೆಚ್ಚುತ್ತದೆ.ಅಂತಹ ಅಡಿಕೆ ತೋಟದಲ್ಲಿ ಉತ್ತಮ ಫಸಲು ಬರುವುದಿಲ್ಲ.

ಇದನ್ನೂ ಓದಿ: ಕೆಳದಿಯ ಅರಸರ ಕಾಲದ ಅಡಿಕೆ ತಳಿ

ಮೊದಲ ಎರಡು ಮೂರು ವರ್ಷ ಬಾಳೆಗಿಂತ ಎರಡು ಪಾಲು ಹೆಚ್ಚು ಆದಾಯ ಕೊಡಬಲ್ಲ ಮಿಶ್ರ ಬೆಳೆಗಳು ಇವೆ.

ಅನನಾಸು, ಶುಂಠಿ, ಅರಶಿನ ಹಾಗೆಯೇ ಸಾಧ್ಯವಿದರೆ ಸ್ಪರ್ಧೆ ಮಾಡದಂತಹ ತರಕಾರಿ ಬೆಳೆಗಳನ್ನು ಬೆಳೆಯಬಹುದು.

ಅಡಿಕೆ ತೋಟದಲ್ಲಿ ಬಾಳೆ ಬೆಳೆದರೆ 2 ವರ್ಷವಾದರೂ ಬೆಳವಣಿಗೆ ಇಷ್ಟೇ.

ಅಡಿಕೆ – ಬಾಳೆ ಹೊಂದಿಕೆ ಇಲ್ಲ:

ಅಡಿಕೆ ಮತ್ತು ಬಾಳೆ ಎಲ್ಲಾ ಸಮಯದಲ್ಲೂ ಹೊಂದಾಣಿಕೆಯಾಗುವ ಬೆಳೆಗಳಲ್ಲ.

ಅಡಿಕೆ ಸಸಿಯ ಎಳೆ ಪ್ರಾಯದಲ್ಲಿ ಬಾಳೆಯನ್ನು ಬೆಳೆಸಿದರೆ ಎಳೆ ಪ್ರಾಯದ ಅಡಿಕೆ ಸಸಿಗಳ ಕೆಲವು ಅಗತ್ಯ ಬೆಳೆವಣಿಗೆಗೆ ತೊಂದರೆ ಉಂಟಾಗುತ್ತದೆ.

ಅಡಿಕೆ, ತೆಂಗು ಮುಂತಾದ ಧೀರ್ಘಾವಧಿಯ ಬೆಳೆಗಳಲ್ಲಿ ರೈತರು ಅನುಸರಿಸಬೇಕಾದ ಮಹತ್ವದ ಬೇಸಾಯ ಕ್ರಮ, ಎಳೆ ಪ್ರಾಯದ ಸೂಕ್ತ ನಿರ್ವಹಣೆ.

ಇದನ್ನೂ ಓದಿ: ಅಡಿಕೆ ಸಸಿಗಳಿಗೆ KGF to ಕ್ಯಾಸನೂರಿಗೆ ಯಶ್ ಪಯಣ

ಒಂದು ಅಡಿಕೆ ಸಸಿ ಒಂದು ವರ್ಷಕ್ಕೆ ಇಷ್ಟೇ ಬೆಳವಣಿಗೆ ಹೊಂದಬೇಕು, ಎರಡು ವರ್ಷಕ್ಕೆ ಇಷ್ಟು ಬೆಳವಣಿಗೆ ಹೊಂದ ಬೇಕು. ಮೂರನೇ ವರ್ಷಕ್ಕೆ ಹೂ ಗೊಂಚಲು ಬಿಡಬೇಕು ಎಂಬುದು ಅದರ ಬೆಳೆ ಶಾಸ್ತ್ರ.

ಪ್ರಾರಂಭದ ಎರಡು – ಮೂರು ವರ್ಷದ ಆರೈಕೆ ಮತ್ತು ಆ ಸಮಯದಲ್ಲಿ ಸಸಿಯ ಅಂತರ್ಗತ ಶಕ್ತಿ, ಅದರ ಜೀವಮಾನದ ಉತ್ಪಾದಕತೆಯನ್ನು ನಿರ್ಧರಿಸುತ್ತದೆ.

ಎಳೆ, ಪ್ರಾಯದಲ್ಲಿ ಅದನ್ನು ನಾವು ಹೆಚ್ಚು ನಿಗಾ ಕೊಟ್ಟು ಸಾಕಬೇಕು. ನಂತರ ಅದು ನಮ್ಮನ್ನು ಸಾಕುತ್ತದೆ.

ಬಾಳೆ ನೆಟ್ಟರೆ ಅಡಿಕೆ ಸಸ್ಯಕ್ಕೆ ಬೆಳವಣಿಗೆಗೆ ಬೇಕಾಗುವ ಬೆಳಕಿನ ಕೊರತೆ ಆಗುತ್ತದೆ. ಬೆಳಕು ಕಡಿಮೆ ಆದರೆ ಅಡಿಕೆ ಗಿಡದ ಬೆಳವಣಿಗೆಯನ್ನು ಹತ್ತಿಕ್ಕಲ್ಪಡುತ್ತದೆ.

ಬಹಳಷ್ಟು ಜನರ ಅಡಿಕೆ ತೋಟಗಳಲ್ಲಿ ಸಪುರ, ಅನುತ್ಪಾದಕ ಮರಗಳು ಹೆಚ್ಚಾಗಿದ್ದರೆ ಅಲ್ಲಿ ಬಾಳೆ ನೆಡಲಾಗಿದೆ ಎಂದು ತಿಳಿಯಬಹುದು.

ಬಾಳೆ ಬೆಳೆಸಿದರೆ ಏನಾಗುತ್ತದೆ:

ಬಾಳೆಗೆ ತಾಯಿ ಬೇರು ಇಲ್ಲ. ಅಡಿಕೆಗೂ ತಾಯಿ ಬೇರು ಇಲ್ಲ. ಬಾಳೆಯ ಬೇರು ನೆಲದ ಪೂರ್ತಿ ಕೇವಲ 3-4 ತಿಂಗಳಲ್ಲಿ ಆವರಿಸುತ್ತದೆ. ಅಡಿಕೆ ಅದರ 5% ವೂ ಇಲ್ಲ.

ಬಾಳೆ ಬೆಳೆ ಕೆಲವೇ ಸಮಯದಲ್ಲಿ ಬಾರೀ ಬೆಳವಣಿಗೆಯಾಗುವ ಸಸ್ಯ. ಸುಮಾರು 6-7 ತಿಂಗಳಿಗೆ ಕನಿಷ್ಟ 6 ಅಡಿ ಸುತ್ತಳತೆಯನ್ನು ವ್ಯಾಪಿಸುತ್ತದೆ.

ಅಷ್ಟು ಬೆಳೆಯಬೇಕಿದ್ದರೆ ಅದು ಅಷ್ಟೇ ವೇಗವಾಗಿ ಲಭ್ಯವಿರುವ ಎಲ್ಲಾ ಪೋಷಕಾಂಶಗಳನ್ನೂ ಹೀರಿಕೊಳ್ಳುತ್ತದೆ.

ಬಾಳೆಯ ಬೇರಿನ ಬೆಳೆವಣಿಗೆ ದಿನಕ್ಕೆ 1-2 ಇಂಚಿನಷ್ಟು. ಅಡಿಕೆ ಸಸ್ಯದ ಬೇರಿನ ಬೆಳೆವಣಿಗೆ ದಿನಕ್ಕೆ ಹೆಚ್ಚೆಂದರೆ 1-2 ಮಿಲಿ ಮೀಟರುಗಳಷ್ಟು.

ಇದನ್ನೂ ಓದಿ:ಅಡಿಕೆ ಸಸಿಗಳ ಆಯ್ಕೆ ಬಗ್ಗೆ ತಿಳಿಯಲು

ಅಡಿಕೆ ಸಸ್ಯಕ್ಕೆ ನಾವು ಕೊಡುವ ಎಲ್ಲಾ ಪೋಷಕಾಂಶಗಳನ್ನೂ ಬಾಳೆ ಸಸ್ಯವು ತನ್ನ ಆಹಾರ ದಾಹೀ ಬೇರುಗಳ ಮೂಲಕ ಮೊದಲು ಬಳಸಿಕೊಳ್ಳುತ್ತವೆ.

ಅಡಿಕೆ ಸಸಿಗಳಿಗೆ ಬೇಕಾದಾಗ ಪೋಷಕಗಳ ಲಭ್ಯತೆ ಇಲ್ಲದಾಗುತ್ತದೆ.

ಯಾವುದೇ ಸಸ್ಯವು ಉತ್ತಮವಾಗಿ ಬೆಳೆಯಲು ಅಗತ್ಯ ಪ್ರಮಾಣದಲ್ಲಿ ಬೆಳೆಕು ಬೇಕು. ಬಾಳೆಯನ್ನು ಬೆಳೆಸಿದಾಗ ಅವಶ್ಯಕತೆಗಿಂತ ಕಡಿಮೆ ಬಿಸಿಲು ಲಭಿಸಿ ಸರಿಯಾಗಿ ದ್ಯುತಿಸಂಸ್ಲೇಷಣ ಕ್ರಿಯೆ ನಡೆಯದೆ ಸಸ್ಯ ಬಡವಾಗುತ್ತದೆ.

ಬಾಳೆ ಬೆಳೆಗೆ ಅಧಿಕ ಪ್ರಮಾಣದಲ್ಲಿ ಜಂತು ಹುಳ( ನಮಟೋಡು) ಬಾಧೆ ಇರುತ್ತದೆ. ಇದು ಬಾಳೆಯಲ್ಲದೆ ಅಡಿಕೆ ಸಸ್ಯಕ್ಕೂ ವ್ಯಾಪಿಸುವ ಸಾಧ್ಯತೆ ಇದ್ದು, ಇದು ಅಡಿಕೆ ಸಸ್ಯದ ಬೇರಿನ ಬೆಳೆವಣಿಗೆಯನ್ನು ಹತ್ತಿಕ್ಕುತ್ತದೆ.

ಇನ್ನೂ ಬಾಳೆಯ ಕಾರಣದಿಂದ ( ಕಂದು, ಮಗುಚಿ ಬೀಳುವುದು ಇತ್ಯಾದಿ) ಉಂಟಾಗುವ ನಷ್ಟ ಬೇರೆ ಇದೆ.

ಮಳೆಗಾಲದಲ್ಲಿ ನೀರು ಹೆಚ್ಚಾಗಿ ಅಡಿಕೆ ಸಸಿಗಳ ಕೊಳೆಯುವಿಕೆಗೂ ಕಾರಣವಾಗುತ್ತದೆ.

ಅಡಿಕೆ ಸಸಿಯೊಂದಿಗೆ ಸೂಕ್ತ ಮಿಶ್ರ ಬೆಳೆ:

ಅಡಿಕೆ ಸಸಿ ನೆಟ್ಟು ಮೊದಲನೇ ವರ್ಷ ಬೆಳೆಸಬಹುದಾದ ಮಿಶ್ರ ಬೆಳೆಗಳಲ್ಲಿ ಅರಶಿನ – ಶುಂಠಿ ಅಥವಾ ಅನನಾಸು.

ಈ ಮೂರೂ ಬೆಳೆಗಳನ್ನೂ ಸಸಿ ಬೆಳೆಸಿದ ನಂತರ ಯಾವುದೇ ವರ್ಷದಲ್ಲೂ ಮಿಶ್ರ ಬೆಳೆಯಾಗಿ ಬೆಳೆಸಬಹುದು.

ಬಾಳೆಯನ್ನು ಅಡಿಕೆ ಸಸಿಗೆ ಸುಮಾರು 5 ವರ್ಷ ಕಳೆದ ನಂತರ ನಾಟಿ ಮಾಡಬೇಕು. ಈ ಸಮಯದಲ್ಲಿ ಬಾಳೆಗೆ ನೆರಳು – ಬೆಳೆಕು ಸಮನಾಗಿ ಹಂಚಿಕೆಯಾಗಿ ದೊರೆತು ಬಾಳೆಯ ಗೊನೆ ಉತ್ತಮ ಗಾತ್ರದಲ್ಲಿ ದೊರೆಯುತ್ತದೆ.

ಈ ಸಮಯದಲ್ಲಿ ಅಡಿಕೆ ಸಸಿ ಬಾಳೆಗಿಂತ ಎತ್ತರಕ್ಕೆ ಬೆಳೆದು ಬೆಳಕಿನ ಕೊರತೆ ಅನುಭವಿಸುವುದಿಲ್ಲ.

ನಾವು ತಿಳಿದಂತೆ ಬಾಳೆಗೆ ಸ್ವಲ್ಪ ಮಟ್ಟಿನ ನೆರಳು ಉತ್ತಮ ಇಳುವರಿಗೆ ಸಹಾಯಕವಾಗುತ್ತದೆ. ಅಡಿಕೆ ತೋಟಕ್ಕೂ ಫಲ ಕೊಡುವ ಸಮಯದಲ್ಲಿ ಇದು ಸೂಕ್ತಸೂಕ್ಷ್ಮ ವಾತಾವರಣವನ್ನು ಕೊಡುತ್ತದೆ.

ಗೊನೆ ಹಾಕಿದಾಗ ಬಾಳೆ ಯನ್ನು ಆಧರಿಸಲು ಅಡಿಕೆ ಮರಗಳು ನೆರವಾಗುತ್ತವೆ.

ಕೆಲವರು ಅಡಿಕೆ ಸಸಿಯ ಜೊತೆಗೆ ಬಾಳೆ ನಾಟಿ ಮಾಡಿದರೆ ಅಡಿಕೆಗೆ ನೆರಳು ಮಾಡಬೇಕಾದ ಅವಶ್ಯಕತೆ ಇರುವುದಿಲ್ಲ ಎಂದು ವಾದಿಸುತ್ತಾರೆ. ಅಡಿಕೆ ಸಸಿಗೆ ಅಂತಹ ನೆರಳು ಬೇಕಾಗಿಲ್ಲ. ಮಣ್ಣಿನ ಫಲವತ್ತತೆ ನಷ್ಟವಾಗದಂತೆ ಅಡಿಕೆ ಜೊತೆಗೆ ತೊಗರಿ ಸಸ್ಯವನ್ನು ನಾಟಿ ಮಾಡಿದರೆ ಸಾಕಾಗುತ್ತದೆ.ಅಡಿಕೆ ಸಸಿಗೆ ಮಕರ ಸಂಕ್ರಮಣದ ತನಕ ನೆರಳು ಹೆಚ್ಚು ಬೇಕಾಗುತ್ತದೆ. ನಂತರ ವಾತಾವರಣದಲ್ಲಿ ಅರ್ಧ್ರತೆ ಹೆಚ್ಚು ಇರುವ ಕಾರಣ ಅಂತಹ ತೊಂದರೆ ಇರುವುದಿಲ್ಲ.

ಸರಿಯಾದ ಪೋಷಕಾಂಶ ನಿರ್ವಹಣೆ ಮತ್ತು ಬೇಸಾಯ ಕ್ರಮದಲ್ಲಿ ನೆರಳು ರಹಿತವಾಗಿ ಚೆನ್ನಾಗಿ ಸಸಿ ಬೆಳೆಸಬಹುದು.

ಯಾರು ಮೊದಲ ಎರಡು – ಮೂರು ವರ್ಷ ಕಾಲ ಬಾಳೆಯನ್ನು ಮಿಶ್ರ ಬೆಳೆಯಾಗಿ ಬೆಳೆಸಲಿಲ್ಲವೋ ಅಲ್ಲೆಲ್ಲಾ ಅಡಿಕೆ ತೋಟ ದಲ್ಲಿ ಅನುತ್ಪಾದಕ ಮರಗಳು ತುಂಬಾ ಕಡಿಮೆ.

ಇದನ್ನೂ ಓದಿ: ಅಡಿಕೆ ತೋಟ ಮಾಡಬೇಕೇ? ಅದಕ್ಕೂ ಮೊದಲು ಇದೆಲ್ಲ ತಿಳಿದಿರಲಿ

ಅಡಿಕೆ – ತೆಂಗಿನ ಮರಕ್ಕೆ ಎಳೆಯ ಪ್ರಾಯದಲ್ಲಿ ಬುಡ ಭಾಗದಲ್ಲಿ ಬೊಡ್ಡೆ (Bole) ಬೆಳೆದರೆ ಅದರ ಶಕ್ತಿಯೇ ಬೇರೆ ಇರುತ್ತದೆ. ಅಧಿಕ ನೆರಳು, ಆಹಾರದ ಕೊರೆತೆ ಇದರಿಂದ ಬಹುತೇಕ ಅಡಿಕೆ ಸಸ್ಯಗಳು ಬೊಡ್ಡೆ ಬಿಡುವುದೇ ಇಲ್ಲ.

ಅಡಿಕೆ ಬೆಳೆಸುವ ರೈತರು ಸೂಕ್ತ ಮಿಶ ಬೆಳೆಯನ್ನು ಆರಿಸಿಕೊಂಡರೆ ಮೂರೇ ವರ್ಷದಲ್ಲಿ ಜಾಗದ ಮತ್ತು ಅಡಿಕೆ ತೋಟದ ಖರ್ಚನ್ನು ಅದರಲ್ಲಿ ಗಳಿಸಬಹುದು. ಸಸಿಯಾಗಿ ತಿಳಿದುಕೊಳ್ಳದೆ ಯಾರೋ ಹೇಳಿದರು ಎಂದು ಬಾಳೆ ಬೆಳೆದರೆ ಅಡಿಕೆ ತೋಟದ ಭವಿಷ್ಯ ಹಾಳಾಗುತ್ತದೆ.


Follow the ಅಡಿಕೆ ಬೆಳೆಗಾರರ ಚಾನೆಲ್ channel on WhatsApp: https://whatsapp.com/channel/0029Va6CXv17dmeYrgQil235

ಸೋಮವಾರ, ಜೂನ್ 6, 2022

ಅಡಿಕೆ ಕೊಳೆ ನಿಯಂತ್ರಣ ಮಾಡುದು ಹೇಗೆ....

ಮಳೆಗಾಲ  ಇನ್ನೇನು ಪ್ರಾರಂಭವಾಗಲಿದೆ. ಅಡಿಕೆಗೆ ಕೊಳೆಗಾಲ. ಅಂದರೆ  ಮಳೆ  ಬಿದ್ದ 15 ದಿನ  ನಂತರ  ಕೊಳೆ ಫಂಗಸ್  ಎಳೆಗಾಯಿಗಳ  ತೊಟ್ಟುಗಳನ್ನು ಪ್ರವೇಸಿಸಿ ಅಭಿರುದ್ಧಿ ಹೊಂದುವುದು.  ಇದರಿಂದ   ತೊಟ್ಟುಗಳು ಕೊಳೆತು  ಎಳೆಗಾಯಿ ಉದುರುವುವು (ಜೂನ್ -ಜುಲೈ ). ಆಗಸ್ಟ್ ತಿಂಗಳಲ್ಲಿ  ಮಳೆ  ಹೆಚ್ಚಾಗಿ ಅರೆ ಬಲಿತ  ಅಡಿಕೆ ಸಿಪ್ಪೆ ಮೇಲೆ ಬೂದು ಬಣ್ಣದ  ಫಂಗಸ್  ಬೆಳೆದು  ಕೊಳೆಯುವದರಿಂದ  ನೀರ್ಗೋಳೆ ಉಂಟಾಗುವುದು.  ಸೆಪ್ಟೆಂಬರ್ - ಅಕ್ಟೋಬರ್ ತಿಂಗಳಲ್ಲಿ  ಬಲಿತ  ಕಾಯಿಗಳಿಗೆ  ಬೂದು  ಗೊಳೆ ಬರುವುದು.
ನಿರ್ವಹಣೆ
1) ಮಣ್ಣಿಗೆ 1 ಎಕರೆಗೆ  2 ಕ್ವಿoಟಾಲ್  ಕೃಷಿ  ಸುಣ್ಣ ಕೊಡಿ
2) ಕಳೆದ  ವರ್ಷ ಕೊಳೆ ಪೀಡಿತ  ಸತ್ತ  ಹಿಂಗಾರಗಳನ್ನು  ತೆಗೆಯಿರಿ
3) ಬಸಿಗಲುವೇಗಳನ್ನು  ಸ್ವಚ್ಛಗೊಳಿಸಿ, ಕೊಳೆಪೀಡಿತ ಉದುರಿದ ಕಾಯಿಗಳನ್ನು  ತೆಗೆಯಿರಿ
4) ಅಂತರ ಬೆಳೆಗಳ  ಮತ್ತು ಕಾಡುಮರಗಳ  ಹೆಚ್ಚುವರಿ ರೆಂಬೆ ಕೊಂಬೆಗಳನ್ನು  ಕತ್ತರಿಸಿ  ತೆಗೆಯಿರಿ
5) ತಟಸ್ತ ಗೊಳಿಸಿದ ( ರಸಸಾರ  6.5 ರಿಂದ 7.5 ) ಶೇಕಡಾ  1 ರ  ಬೋರ್ಡೊ ದ್ರಾವಣ  ಸಿಂಪರಿಸಿ. ಇದಕ್ಕೆ ಬದಲಾಗಿ   ಶೇ. O.25 ರ ( 200 ಲೀಟರ್ ನೀರಿಗೆ 500 ಗ್ರಾಂ ) ತಾಮ್ರದ ಆಕ್ಸಿಕ್ಲೋರೈಡ್ ಅಥವಾ ಶೇo.2ರ ( 200 ಲೀಟರ್ ನೀರಿಗೆ  400ಗ್ರಾಂ ) ಮೆಟಲಕ್ಸಿಲ್ ಎಂ ಜಡ್ಸಿಂಪರಿಸಿ.) ಮಳೆ  ಹೆಚ್ಚು  ಬೀಳುವ  ಪ್ರದೇಶಗಳಲ್ಲಿ  ಬೋರ್ಡೋ ಸಿಂಪರಣೆ  ನಂತರ ಪ್ಲಾಸ್ಟಿಕ್ ಕೊಟ್ಟೆ ಕಟ್ಟಬಹುದು.

Follow the ಅಡಿಕೆ ಬೆಳೆಗಾರರ ಚಾನೆಲ್ channel on WhatsApp: https://whatsapp.com/channel/0029Va6CXv17dmeYrgQil235

ಗುರುವಾರ, ಜೂನ್ 2, 2022

KGF ನಟ ಯಶ್ ಕ್ಯಾಸನೂರು ತಳಿ ಅಡಿಕೆ ತೋಟದ ಸಿದ್ದತೆ

ನಟ ರಾಕಿಂಗ್ ಸ್ಟಾರ್ ಯಶ್ ಇದೀಗ ಕೆಜಿಎಫ್ ಸಿನಿಮಾ ಮೂಲಕ ವಿಶ್ವ ಮಟ್ಟದಲ್ಲಿ ಸದ್ದು ಮಾಡುತ್ತಿದ್ದಾರೆ. ಹೌದು ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಭಾಗ-2 ಕಲೆಕ್ಷನ್ ವಿಚಾರದಲ್ಲಿ ದಾಖಲೆ ಮಾಡಿರುವುದು ಎಲ್ಲರಿಗೂ ಗೊತ್ತು. ಇದು ಎಲ್ಲಾ ಕನ್ನಡಿಗರಿಗೂ ಹೆಮ್ಮೆಯ ವಿಷಯ. ನಿರ್ದೇಶಕ ಪ್ರಶಾಂತ್ ನೀಲ್ ಅವರು ಕನ್ನಡದ ಶಕ್ತಿಯನ್ನು ಇಡಿ ದೇಶಕ್ಕೆ ಮತ್ತು, ಹೊರದೇಶಕ್ಕೂ ಕೂಡ ಈ ಕೆಜಿಎಫ್ ಸಿನಿಮಾ ಮೂಲಕ ತೋರಿಸಿದ್ದಾರೆ. ನಟ ರಾಕಿಂಗ್ ಸ್ಟಾರ್ ಯಶ್ ಹೆಚ್ಚು ಕುಟುಂಬದ ಜೊತೆ ಈಗ ಕಾಣಿಸಿಕೊಳ್ಳುತ್ತಿದ್ದು ಸೋಷಿಯಲ್ ಮೀಡಿಯಾದಲ್ಲಿ ಯಶ್ ಅವರ ಕುರಿತಾಗಿ ಇನ್ನೊಂದು ವಿಚಾರ ಹೊರಗಡೆ ಬೀಳುತ್ತಿದೆ.

ಯಶ್ ಅವರ ಮುಂದಿನ ಸಿನಿಮಾ ಯಾವುದು.? ಯಾರು ನಿರ್ದೇಶಕರು ಎನ್ನುವ ವಿಚಾರ ಇಷ್ಟರಲ್ಲೆ ತಿಳಿಯುತ್ತಿದ್ದು, ಯಶ್ ಅವರ 19ನೇ ಚಿತ್ರ ಸೆಟ್ಟೇರಲಿದೆಯಂತೆ. ಮುಹೂರ್ತ ಕೂಡ ಫಿಕ್ಸ್ ಆಗುತ್ತಿದೆ ಎಂದು ಕೇಳಿಬರುತ್ತಿದೆ. ಕೆಜಿಎಫ್ ಸಿನಿಮಾ 50 ದಿನ ಪೂರೈಸಿದ ದಿನವೇ ಈ ಮಾಹಿತಿ ಹೊರ ಬೀಳುತ್ತಿದೆ ಎಂದು ಕೇಳಿ ಬಂದಿದೆ. ಹೌದು ಯಶ್ ಅವರು ಅವರ ತಂದೆ ತಾಯಿಗೆ ಈಗಾಗಲೇ ಸಾಕಷ್ಟು ಮಾಡಿದ್ದಾರೆ. ಒಂದು ಫಾರ್ಮ್ ಹೌಸ್ ಕೊಂಡುಕೊಂಡ ಯಶ್, ತೋಟಕ್ಕೆ ಬೇಕಾಗಿರುವ ಎಲ್ಲಾ ವಸ್ತುಗಳನ್ನು ಕೂಡ ನೀಡಿದ್ದಾರೆ. ತಂದೆ ತಾಯಿಗೆ ಹಾಗೂ ತಂಗಿಗೂ ಸಹ ದುಬಾರಿ ಗಿಫ್ಟ್ ನೀಡಿದ್ದಾರೆ. ಹಾಗೆ ತಂದೆ-ತಾಯಿಗೆ ಓಡಾಡಲು ಟಾಟಾ ವೆಲ್ಫೇರ್ ದುಬಾರಿ ಕಾರನ್ನು ಕೂಡ ಕೊಟ್ಟಿದ್ದಾರೆ ಎನ್ನಲಾಗುತ್ತಿದೆ.
ನಟನೆ ಜೊತೆಗೆ ರಾಕಿಂಗ್ ಸ್ಟಾರ್ ಯಶ್ ಸಾಹೇಬ್ರು ದರ್ಶನ ಸಾಹೇಬ್ರ ಹಾಗೆ ತೋಟ ಮಾಡೋಕೆ ಮುಂದಾಗಿದ್ದು ಈಗ ಸುದ್ದಿಯಾಗಿದೆ. ಯಶ್ ಅವರು ಈಗಾಗಲೇ ತೇಜ್ ನರ್ಸರಿಯ ಶಿವನಪುರ ರಮೇಶ ಅವರನ್ನ ಬೇಟಿಯಾಗಿ ಅಡಕೆ ತೋಟ ಮಾಡುವ ಬಗ್ಗೆ ಚರ್ಚೆ ನಡೆಸಿದ್ದಾರೆ. ಬಹಳ ಕಡೆ ಕೇಳಿಪಟ್ಟ ಕ್ಯಾಸನೂರು ಅಡಿಕೆ ತಳಿ ಬೆಳೆಯಲು ಉತ್ಸುಕರಾಗಿದ್ದ ಯಶ್ ಅವರು ಚಾಲೆಂಜಿಂಗ್ ಸ್ಟಾರ್ ದರ್ಶನ ಅಭಿಪ್ರಾಯ ಪಡೆದ್ದಿದ್ದಾರೆ. ದರ್ಶನ ಅವರು ಕೂಡ ಕ್ಯಾಸನೂರಿನ ಮಹಾಬಲೇಶ್ವರ ಅವರ ಬಳಿ ಅಡಿಕೆ ಸಸಿ ಪಡೆದು ಹಾಕಿರುವ ತೋಟ ತೋರಿಸಿ ಇದೇ ತಳಿ ಹಾಕುವಂತೆ ಸಲಹೆ ನೀಡಿದದ್ದಾರೆಂದು ಶಿವಪುರ ರಮೇಶ್ ಮಾಧ್ಯಮಗಳ ಮುಂದೆ ಯಶ್ ಫ್ಲಾನ್ ಹೊರಹಾಕಿದ್ದಾರೆ. ಯಾವಾಗಲೂ ಅಡಿಕೆಗೆ ಅಧಿಕ ಬೆಲೆ ಇರುವುದರಿಂದ ಅಧಿಕ ಇಳುವರಿ ಕೊಡುವ ಸದೃಢ ಮರವಾಗುವ ಯಾವುದೇ ರೋಗರುಜನೆಗಳಿಗೆ ತುತ್ತಾಗದ ಕ್ಯಾಸನೂರು ಸ್ಥಳೀಯ ಅಡಿಕೆಯ ಸಸಿಗಳಿಗಾಗಿ ಕ್ಯಾಸನೂರು ಮಹಾಬಲೇಶ್ವರ ಅವರನ್ನ ಸಂಪರ್ಕಿಸಿದ್ದಾರೆಂದು ತಿಳಿದು ಬಂದಿದೆ. ಮೂಲಗಳ ಪ್ರಕಾರ ಮಹಾಬಲೇಶ್ವರ ಪತ್ರಕರ್ತರಾಗಿ ಕನ್ನಡದ ಅನೇಕೆ ಚಾನೆಲ್‌ಗಳಲ್ಲಿ ಕೆಲಸ ಮಾಡಿ ಅಜ್ಜ ಮಾಡಿದ್ದ ತೋಟ ಮನೆ ನೋಡಿಕೊಂಡು ಕೃಷಿ ಬದುಕು ನಡೆಸುತ್ತಿದ್ದಾರೆ. ಇವರಲ್ಲಿ ಸಹಜವಾಗಿ ಆರ್ಗಾನಿಕ್ ಆಗಿ ಬೆಳೆದ ಆಯ್ದ ಬೀಜಗಳಿದ್ದ ಮಾಡಿದ ಉತ್ತಮ ಅಡಿಕೆ ಸಸಿಗಳನ್ನ ಮಾಡಿ ತಮ್ಮ ಸ್ನೇಹಿತರಿಗೆ ಮಾತ್ರ ಮಾರುತ್ತಾರೆಂದು ಶಿವನಪುರ ರಮೇಶ್ ಹೇಳಿದರು. ಈಗಾಗಲೆ ಶಿವನಪುರ ರಮೇಶ್ ಅನೇಕ ಸೆಲೆಬ್ರಿಟಿಗಳಿಗೆ ಇವರ ಬಳಿ ಅಡಿಕೆಸಸಿಗೆ ಸಂಪರ್ಕಿಸುತ್ತಾರೆ.
ಯಶ್ ಕೂಡ ಕೃಷಿ ಒಲವು ಹೊಂದಿದ್ದು ದರ್ಶನ್ ತರ ಒಂದೊಳ್ಳೆ ಫಾರ್ಮ್ ಅದರ ಜೊತೆಗೆ ಅಡಿಕೆ ತೋಟ ಮಾಡುವ ಇಚ್ಚೆ ನೋಡಿದರೇ ಎಂಥವರಿಗೂ ಹೆಮ್ಮೆ ಎನ್ನಿಸುತ್ತಿದೆ.

Follow the ಅಡಿಕೆ ಬೆಳೆಗಾರರ ಚಾನೆಲ್ channel on WhatsApp: https://whatsapp.com/channel/0029Va6CXv17dmeYrgQil235