ಏನು ಮಾಡಬೇಕು?
ಅಡಿಕೆ ತೋಟದಲ್ಲಿ ಹೆಚ್ಚಿನ ಫಸಲು ಸಿಗಬೇಕಾದರೆ ಸರಿಯಾದ ನೀರು ಪೂರೈಕೆ ಆಗಬೇಕು, ಗಾಳಿ, ಬೆಳಕು ಸರಿಯಾಗಿ ಬೀಳಬೇಕು. ಮುಖ್ಯವಾಗಿ ಅಲ್ಲೆ ಬೀಳುವ ಕಸ ಕಡ್ಡಿ, ಹಾಳೆ ಇತ್ಯಾದಿಗಳನ್ನು ಗೊಬ್ಬರವಾಗಿ ಮಣ್ಣಿನ ಸೇರುವಂತೆ ಮಾಡಬೇಕು. ರಸಾಯನಿಕ ಗೊಬ್ಬರ ಬಳಸಲೇ ಬಾರದು. ಸಾವಯವ ಗೊಬ್ಬರ ಹಾಕುವ ಮೂಲಕ ನಿಮ್ಮ ತೋಟವನ್ನು ಆರೋಗ್ಯ ಕರವಾಗಿ ಇಡಬಹುದಾಗಿದೆ.
ಹರಳು ಉದುರುವಿಕೆ ಯಾಕೆ?
ಕೆಲವು ತೋಟಗಳಲ್ಲಿ ನೀರಿನ ತೇವಾಂಶ ಹೆಚ್ಚಾದರೂ ಹರಳು ಉದುರುವಿಕೆ ಉಂಟಾಗುತ್ತದೆ. ತೋಟಗಳಲ್ಲಿ ಶೀತದ ವಾತಾವರಣ ದಿಂದ ಹರಳು ಉದುರುವ ಬಾಧೆ ಕಂಡು ಬರುತ್ತದೆ. ಒಂದು ವೇಳೆ ಅಡಿಕೆ ಗಿಡದ ಎಲೆಗಳು ಹಳದಿ ಬಣಕ್ಕೆ ತಿರುಗಿದರೆ, ಕ್ಯಾಲ್ಸಿಯಂ ನೈಟ್ರೇಟ್ಆನ್ನು ನೀರಿಗೆ ಬೆರೆಸಿ ಸಿಂಪಡಿಸಬಹುದು. ಹರಳು ಉದುರುವಿಕೆಗೆ ನೀರು ಬಸಿಯದ ತೋಟಗಳಲ್ಲಿ ಕಾಲುವೆಗಳನ್ನು ಮಾಡಿ, ತೋಟದ ಸುತ್ತಲೂ ನಿಂತ ನೀರು ಕಾಲುವೆಗಳನ್ನು ಸ್ವಚ್ಚಗೊಳಿಸುವುದು ಮಾಡಬೇಕು.
ಇಳುವರಿ ಹೆಚ್ಚು.
ನೀವು ಅಡಿಕೆ ಗಿಡಗಳನ್ನು ಪ್ರೀತಿಯಿಂದ ನೋಡಿಕೊಳ್ಳುವುದು ಮುಖ್ಯ, ಅದ್ರೆ ಅಡಿಕೆ ಗಿಡಗಳು ಆರೋಗ್ಯ ವಾಗಿಡಲು ಗಿಡಕ್ಕೆ ಅನುಗುಣವಾದ ಪೋಷಕಾಂಶ ಗಳನ್ನು ನೀಡುವುದು. ಮನೆಯಲ್ಲಿಯೇ ಮಾಡಿದ ಗೊಬ್ಬರ ಹಾಕುವುದು.ನೀರು ನಿಲ್ಲದಂತೆ ನೋಡಿಕೊಳ್ಳುವುದು ಇತ್ಯಾದಿ ಮಾಡಿದ್ರೆ ಹೆಚ್ಚಿನ ಇಳುವರಿ ಕಾಣಲು ಸಾಧ್ಯ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ