ಕೃಷಿ ಕ್ಷೇತ್ರದಲ್ಲಿ ದಿನಕ್ಕೊಂದು ಬದಲಾವಣೆ, ಹೊಸ ಹೊಸ ಪ್ರಯೋಗ, ಕೃಷಿ ವಿಜ್ಞಾನಿಗಳ ಅಧ್ಯಯನ, ಹೊಸ ಹೊಸ ತಳಿಗಳ ಪರಿಚಯ, ಸಾವಯವ-ರಸಾಯನಿಕ, ಇಳುವರಿ ಹೀಗೆ ಎಲ್ಲವೂ ಕಂಡು ಬರುತ್ತಿದೆ. ಈ ನಡುವೆ ಲಾಕ್ ಡೌನ್ ಬಳಿಕ ಪಟ್ಟಣಗಳಲ್ಲಿ ಬದುಕು ಕಟ್ಟಿಕೊಂಡ ಮಂದಿಯೂ ಹಳ್ಳಿಯಲ್ಲಿ ಕೃಷಿಗೆ ಮನಸೋತಿದ್ದು, ಪ್ರಮುಖವಾಗಿ ಅಡಿಕೆ ಬೆಳೆಗೆ ಮನಸೋತು ಅಡಿಕೆ ಗಿಡಗಳನ್ನು ಬೆಳೆಯುತ್ತಿರುವುದು ವಾಸ್ತವ.
ಕಳೆದ ಕೆಲ ವರ್ಷಗಳ ಹಿಂದೆ ಸಾಗರ ಸಮೀಪದ ಯುವಕರೊಬ್ಬರ ಅಡಿಕೆ ಕೃಷಿ ತೋಟ, ಅದರ ಬೆನ್ನಲ್ಲೇ ಸೊರಬ ಸಮೀಪದ ಲೇಪಾಕ್ಷದ ಯುವ ಉದ್ಯಮಿ ಒಬ್ಬರ ಕೃಷಿ ತೋಟದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ, ಮಾಧ್ಯಮದಲ್ಲಿ ಪ್ರಸಾರವಾಗಿ ಇನ್ನಷ್ಟು ಯುವಕರಲ್ಲಿ ಕೃಷಿಯ ಬಗ್ಗೆ ಅರಿವು ಮೂಡಿಸಿದ್ದು, ತೋಟದ ಕೆಲಸ ಲೇಸು ಎನ್ನುವಂತೆ ಮಾಡಿದೆ.
ಹೆಚ್ಚಿನ ಮಾಹಿತಿಗಾಗಿ ನೋಡಿ 👉 ಕ್ಯಾಸನೂರು ಅಡಿಕೆ ಪ್ರಸಿದ್ಧ ಅಡಿಕೆ
ಒಂದು ಕಾಲದಲ್ಲಿ ಮನೆಯಲ್ಲೇ ಇದ್ದು ತೋಟ ನೋಡಿಕೊಳ್ಳುವ ಯುವಕ ಎಂದರೆ ತಾತ್ಸಾರ ಭಾವದಿಂದ ಕಾಣುತ್ತಿದ್ದ ಮಂದಿ ಇಂದು ಪೇಟೆ ಪಟ್ಟಣಗಳಲ್ಲಿ ದುಡಿಯುವ ಯುವಕರ ಬಗ್ಗೆ ತಾತ್ಸಾರ ಮೂಡಿಸುವಂತೆ ಮಾಡಿದ್ದು, ಆ ಮಟ್ಟಕ್ಕೆ ಲಾಕ್ ಡೌನ್ ಬಳಿಕ ಅಡಿಕೆ-ತೋಟದ ಕೃಷಿ ಜನತೆಗೆ ಹಿಡಿಸಿದೆ. ಅಡಿಕೆ ಬೆಳೆದು ಬಂಗಾರದ ಜೀವನ ಕಟ್ಟಿಕೊಂಡ ಹಲವರು ನಮ್ಮ ನಡುವೆ ಇದ್ದು,ಅಡಿಕೆ ಕೃಷಿಯನ್ನು ಕಂದನಂತೆ ಪ್ರೀತಿಸುತ್ತಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ 👉 ಅಡಿಕೆ ಸಸಿಯಲ್ಲೂ ನಡೆಯುತ್ತೆ ಮೋಸ
ಇಂತಹ ಯುವ ಕೃಷಿಕರಿಗಾಗಿ ಇಲ್ಲೊಂದು ಮಾಹಿತಿ-ಅರಿವು ಮೂಡಿಸುವ ಬಗ್ಗೆ ವಿವರಿಸಲಾಗಿದ್ದು, ಹಲವು ಬಗೆಯ ತಳಿಗಳಲ್ಲಿ ಆಯಾ ಪ್ರದೇಶಗಳಿಗೆ ಯಾವ ತಳಿಗಳು ಸೂಕ್ತ ಎನ್ನುವ ವಿಚಾರವನ್ನು ಪ್ರಗತಿಪರ ಕೃಷಿಕರೆಂದು ಹಲವಾರು ಸನ್ಮಾನ-ಪುರಸ್ಕಾರಗಳನ್ನು ಪಡೆದ ಕೃಷಿಕರಿಂದ ತಿಳಿದು, ಆ ಮಾಹಿತಿಯನ್ನು ಇಲ್ಲಿ ವಿಸ್ತಾರವಾಗಿ ಬರೆಯಲಾಗಿದೆ. ಇಂದಿನ ಕಾಲದಲ್ಲಿ ಮಲೆನಾಡು ಭಾಗದಲ್ಲಿ ಕ್ಯಾಸನೂರು ಸೀಮೆ ತಳಿ ಕೆಳದಿ, ಕ್ಯಾಸನೂರು, ಉಮಟೆಗದ್ದೆ ಊರುಗಳಲ್ಲಿ ಈ ನಾಟಿ ತೋಟ ವಿಸ್ತಾರವಾಗಿದೆ. ಕರಾವಳಿ ಪ್ರದೇಶಗಳಲ್ಲಿ ಊರ ಅಡಿಕೆ, ಮಂಗಲ, ಇಂಟರ್ಸ್ಟ್ ಮಂಗಲ, ರತ್ನಗಿರಿ, ಮೋಹಿತ್ ನಗರ ಹೀಗೆ ಕೆಲವೊಂದು ತಳಿಗಳು ಹೆಚ್ಚು ಚಿರಪರಿಚಿತವಾಗಿದೆ.
Click hereಕೆಜಿಎಫ್ ನಟ ಯಶ್ ತೋಟ ಹೇಗಿದೆ ಗೊತ್ತಾ?
ಇವುಗಳಲ್ಲಿ ರೋಗಗಳೇ ಬಾರದ ಕ್ಯಾಸನೂರು ನಾಟಿ ತಳಿಯು ಹೆಚ್ಚು ಫಸಲು ನೀಡುವ ಹಾಗೂ ಅತೀ ಕಡಿಮೆ ಅವಧಿ, ಅಡಿಕೆಯೂ ಭಾರವಿರುತ್ತದೆ ಎನ್ನುವ ಅಭಿಪ್ರಾಯ ಕೃಷಿಕರಲ್ಲಿದ್ದು, ಇದನ್ನು ನೆಡುವ ಕ್ರಮಗಳಲ್ಲಿ ಕೆಲವೊಂದು ಸೂಕ್ಷ್ಮತೆಯ ಅರಿವು ಬೇಕಾಗುತ್ತದೆ.ಮಣ್ಣು ಅಗತೆ ಮಾಡುವ ಕ್ರಮದಿಂದ ಹಿಡಿದು ಗುಂಡಿ, ಅದರ ಸುತ್ತಳತೆ,ಮಳೆ ನೀರು ಹಾದುಹೋಗಲು ವ್ಯವಸ್ಥೆ ಹೀಗೆ ಹತ್ತು ಹಲವು ಕ್ರಮಗಳನ್ನೂ ಮಾಡದಿದ್ದಾರು ಕಳೆ ನಿಯಂತ್ರಿಸಿ ಸಾಧಾರಣ ಕೃಷಿಯಲ್ಲೂ ಅಧಿಕ ಇಳುವರಿ ಗಳಿಸಿ ಮೆಚ್ಚಿಕೊಂಡಿದ್ದಾರೆ.
ಗುಡ್ಡಗಾಡು ಪ್ರದೇಶವನ್ನು ಅಗೆದು ಸಮತಟ್ಟು ಮಾಡಿ ಅಲ್ಲಿ ನೆಡುವ ಗಿಡಗಳಲ್ಲಿ ಕ್ಯಾಸನೂರು ನಾಟಿ ತಳಿ ಮೊದಲ ಸ್ಥಾನದಲ್ಲಿದ್ದು, ಉಳಿದಂತೆ ಪ್ರಸ್ತುತ ಇರುವ ತೋಟದಲ್ಲೇ ಎಡೆ ಎಡೆಯಲ್ಲಿ ಕ್ಯಾಸನೂರು ಪಕ್ಕದ ಉಮಟೆಗದ್ದೆ ಗಿಡಗಳನ್ನು ನೆಡಲಾಗುತ್ತಿದೆ. ಕೆಲವೆಡೆ ಕೆಳದಿಯ ಗಿಡವನ್ನು ನೆಡಲಾಗುತ್ತಿದೆ. ಯಾವ ಕಾರಣಕ್ಕೂ ಹೈಬ್ರಿಡ್, ರತ್ನ ಮಹಲ್, ತೀರ್ಥಹಳಿ, ಭೀಮಸಮುದ್ರ, ಇತ್ಯಾದಿ ಗಿಡಗಳನ್ನ ನೆಡಲೇ ಬೇಡಿ. ಬಿಸಿಲು-ನೆರಳು ಎರಡೂ ಸರಿಸಮಾನಾಗಿ ಗಿಡಗಳಿಗೆ ಅಗತ್ಯವಾಗಿದ್ದು, ಗಿಡಗಳ ಬೆಳವಣಿಗೆ ಹಾಗೂ ಅದರ ಆರೈಕೆಯಲ್ಲಿ ಹೆಚ್ಚಿನ ಉತ್ಸಾಹ ತೋರಿದಾಗ ಫಸಲು ಉತ್ತಮವಾಗಿ ಸಿಗುತ್ತದೆ ಎನ್ನುತ್ತಾರೆ ಸಂದರ್ಶಸಿದ ಕೃಷಿಕರು.
ಅಡಿಕೆ ಕೃಷಿ ಮಾರ್ಗದರ್ಶಕರು - ಮಂಜುನಾಥ್ ಹೆಗಡೆ.
Follow the ಅಡಿಕೆ ಬೆಳೆಗಾರರ ಚಾನೆಲ್ channel on WhatsApp: https://whatsapp.com/channel/0029Va6CXv17dmeYrgQil235
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ