ಸೋಮವಾರ, ಫೆಬ್ರವರಿ 21, 2022

ಅಡಿಕೆ ತೋಟ ಮಾಡುತ್ತೇನೆಂದರೆ ಸಾಲದು ಅದಕ್ಕೂ ಮೊದಲು ಇವೆಲ್ಲ ತಿಳಿದಿರಬೇಕು


1) ಮೊಟ್ಟಮೊದಲು ತಳಿ ಯಾವುದು ಎಂದು ತಿಳಿಯಬೇಕು
ತಳಿಗಳಲ್ಲಿ ಮಲೆನಾಡಿನ ತಳಿ ಉತ್ತಮ ಮಲೆನಾಡಿನ ಕ್ಯಾಸನೂರು ಸೀಮೆ ಮತ್ತು ಕೆಳದಿ ಸೀಮೆ ಭಾಗದ ಅಡಿಕೆ ಅಧಿಕ ಇಳುವರಿ ಮತ್ತು ರಾಶಿ ಮತ್ತು ಚಾಲಿಗೆ ಹೇಳಿ ಮಾಡಿಸಿದ ಅಡಿಕೆ. ಬಹುತೇಕ ಸಸಿಮಾಡುವವರು ಎಲ್ಲೆಲ್ಲಿಯೋ ಬೀಜ ಸಂಗ್ರಹಿಸಿ ತೀರ್ಥಹಳ್ಳಿ, ಸಾಗರ, ಸೊರಬ, ಕ್ಯಾಸನೂರು, ಕೆಳದಿ, ಚನ್ನಗಿರಿ ಎಂದು ಸುಳ್ಳು ಹೇಳಿ ಮಾರುತ್ತಾರೆ

2) ಬೀಜದ ಆಯ್ಕೆ ಬಹಳ ಮುಖ್ಯ. ತಾಯಿ ಮರ 35 ರಿಂದ 65 ವರ್ಷ ಒಳಗಿನ ಬೀಜ ಉತ್ತಮ. ಯಾಕೆಂದ ಸಸ್ಯಶಾಸ್ತ್ರದಲ್ಲೂ ವಂಶಾಭಿವೃದ್ಧಿಗೆ ಅದರಲ್ಲೂ ಅಡಿಕೆಯಂತ ಜಾತಿಯ ಸಸಿಗಳಿಗೆ ಪ್ರಾಯ ಮುಖ್ಯ.

3) ಸಸಿಗಳು ಸಹಜವಾಗಿ ನೈಸರ್ಗಿಕವಾಗಿ ಯಾವುದೇ ರಾಸಾಯನಿಕಗಳನ್ನ ಬಳಸದೇ ಬೆಳೆಸಿರ ಬೇಕು. ಬಹಳಷ್ಟು ರೈತರು ಹಣದ ಆಸೆಗೆ ರೈತರಿಗೆ ಮೋಸ ಮಾಡುತ್ತಾರೆ. ಗಿಡ ಎತ್ತರ ದಪ್ಪ ಇದ್ದರೆ ಹಸಿರಾಗಿದ್ದರೆ ಎಷ್ಟು ಬೆಲೆ ಹೇಳಿದರೂ ಕೊಳ್ಳುರು ಎಂಬ ದುರಾಸೆಗೆ ನಾನಾ ಬಗೆಯ ರಸಾಯನಿಕ ಬಳಸಿ ಬೆಳೆಯುತ್ತಾರೆ. ಇಂತಹ ಸಸಿಗಳು ಮುಂದೆ ಹಾಕಿದ ಕೂಡಲೇ ಅನೇಕ ಬಾದೆಗಳಿಗೆ ತುತ್ತಾಗುತ್ತವೆ. ಆಯುಷ್ಯ ಇವಕ್ಕೆ ಕಡಿಮೆ. ಭವಿಷ್ಯದಲ್ಲಿ ಶಾರೀರಿಕ ಸಮಸ್ಯೆಗಳಿಂದ ಹಲವು ಮರಗಳು ಫಸಲನ್ನ ಸರಿಯಾಗಿ ನೀಡುವುದಿಲ್ಲ
4) ನಂತರ ಅಧಿಕ ಬಿಸಿಲಲ್ಲಿ ಇಟ್ಟು ಬೆಳೆಸಿದ ಗಿಡಗಳು ಕೊಂಡು ಹಾಕಿದರೇ ನೀವು ನೆಟ್ಟ ಒಂದು ವರ್ಷದ ವರೆಗೆ ನೆರಳು ಮಾಡುವ ಅಗತ್ಯ ಬಹುತೇಕ ಇರುವುದಿಲ್ಲ. ಹಚ್ವಹಸಿರಾದ ಗಿಡಗಳು ಬಿಸಿಲಿಗೆ ನರಳುತ್ತವೆ.

5) ಗಿಡಗಳು ಅಧಿಕ ಎತ್ತರ ಇರಬಾರದು. ನರ್ಸರಿಯಲ್ಲಿ ಗಿಡಗಳು ಒಂದರ ಪಕ್ಕ ಒಂದು ಇಟ್ಟು ಬೆಳೆಸುವ ಕಾರಣ. ಅವುಗಳಿಗೆ ಅಹಾರ ಸಂಪೂರ್ಣ ಸಿಕ್ಕಾಗ ಎತ್ತರ ಬೆಳೆಯುತ್ತವೆ. ಸ್ಟೆಮ್ ಅಂದರೆ ಕಾಂಡ ದಪ್ಪ ಇರುತ್ತವೆ ನಿಜ. ಆದರೆ ಸಾಲಿನ ಅಂಚಿನ ಗಿಡಗಳು ಬಿಟ್ಟು ಒಳಗಿನ ಸಸಿಗಳ ಗರಿಗಳು ಕಡ್ಡಿಯಂತಾಗಿರುತ್ತವೆ. ನಾವು ಕೊಂಡುತಂದು ಹಾಕಿದ ನಂತರ ಗಾಳಿಗೆ ಬಳಕು ನೆಲಕ್ಕೆ ಬೀಳುತ್ತವೆ. ಮತ್ತೊಂದು ಹೊಸ ಸುಳಿ ಗರಿಯಾಗುವ ವರೆಗೆ ಸಸಿಗಳು ನರಳುತ್ತವೆ. ಸಸಿಗಳು ಎಷ್ಟೇ ಚಿಕ್ಕದಿದ್ದರೂ ತಲೆ ಕೆಡಿಸಿಕೊಳ್ಳಬೇಡಿ ನಿಮ್ಮ ನೆಲದಲ್ಲಿ ಗಾಳಿ ನೀರು ಆಹಾರಕ್ಕೆ ಬಹುಬೇಗ ಸದೃಢವಾಗಿ ಬೆಳೆಯುತ್ತವೆ.
6) ಸಸಿಗಳನ್ನು ಬೆಳೆಯುವವರು ಯಾರೆಂದು ತಿಳಿಯುವುದು ಅತೀಮುಖ್ಯ. ಬಹಳಷ್ಟು ಸಸಿ ಮಾಡುವ ರೈತರು ಅಡಿಕೆ ಸಸಿ ಮಾಡುವ ಕಸುಬು ಲಾಭದಾಯಕ ಎಂದು ಅದನ್ನೇ ಒಂದು ದಂಧೆ ಮಾಡಿಕೊಂಡಿದ್ದಾರೆ. ಹಾಗಾಗಿ ಅವರು ಯಾವ ಬೀಜಗಳನ್ನ ಬೇಕಾದರೂ ಬೆಳೆಯುವರು. ಸಸಿಗಳಿಗೆ ರಾಸಾಯನಿಕ ಬಳಸಿ ಮಾಡುವರು. ಅದನ್ನ ತಿಳಿಯ ಬೇಕಾದರೆ ಕೃಷಿ ಅಥವಾ ತೋಟಗಾರಿಕೆ ಅಧಿಕಾರಿಗಳ ಸಂಪರ್ಕಿಸಿ ಗಿಡದ ತುದಿಯ ಒಂದು ಇಂಚಿನಷ್ಟು ಎಲೆ ಕತ್ತರಿಸಿ ಇಟ್ಟುಕೊಂಡು ಪರೀಕ್ಷೆಗೆ ಕಳಿಸಿ ಅದು ಸಾವಯವ ಸಸಿಯೋ ರಾಸಾಯನಿಕ ಸಸಿಯೋ ರಿಪೋರ್ಟ್ ಬಂದಮೇಲೆ ಕೊಳ್ಳಿ. ಹಾಪ್ಸಕಾಮ್‌ನಲ್ಲೂ ಸಾವಯವ ಟೆಸ್ಟ್ ಮಾಡುತ್ತಾರೆ.

ಇನ್ನೂ ಅನೇಕೆ ಅಂಶಗಳು ಇವೆ. ಇವು ಅತೀ ಮುಖ್ಯವಾದವು ಅಧಿಕೆ ಮಾಹಿತಿಗೆ ಕೆಳಗಿನ ಲಿಂಕ್‌ನಲ್ಲಿ ಯಾರೋ ಒಬ್ಬ ಪುಣ್ಯಾತ್ಮ ಅಧಿಕೃತ ಮಾಹಿತಿ ನೀಡಿದ್ದಾರೆ  ಓದಿ ನೋಡಿ.. 
👆ಇಲ್ಲಿ ಕ್ಲಿಕ್ ಮಾಡಿ

Follow the ಅಡಿಕೆ ಬೆಳೆಗಾರರ ಚಾನೆಲ್ channel on WhatsApp: https://whatsapp.com/channel/0029Va6CXv17dmeYrgQil235

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ