ಮಳೆಗಾಲ ಇನ್ನೇನು ಪ್ರಾರಂಭವಾಗಲಿದೆ. ಅಡಿಕೆಗೆ ಕೊಳೆಗಾಲ. ಅಂದರೆ ಮಳೆ ಬಿದ್ದ 15 ದಿನ ನಂತರ ಕೊಳೆ ಫಂಗಸ್ ಎಳೆಗಾಯಿಗಳ ತೊಟ್ಟುಗಳನ್ನು ಪ್ರವೇಸಿಸಿ ಅಭಿರುದ್ಧಿ ಹೊಂದುವುದು. ಇದರಿಂದ ತೊಟ್ಟುಗಳು ಕೊಳೆತು ಎಳೆಗಾಯಿ ಉದುರುವುವು (ಜೂನ್ -ಜುಲೈ ). ಆಗಸ್ಟ್ ತಿಂಗಳಲ್ಲಿ ಮಳೆ ಹೆಚ್ಚಾಗಿ ಅರೆ ಬಲಿತ ಅಡಿಕೆ ಸಿಪ್ಪೆ ಮೇಲೆ ಬೂದು ಬಣ್ಣದ ಫಂಗಸ್ ಬೆಳೆದು ಕೊಳೆಯುವದರಿಂದ ನೀರ್ಗೋಳೆ ಉಂಟಾಗುವುದು. ಸೆಪ್ಟೆಂಬರ್ - ಅಕ್ಟೋಬರ್ ತಿಂಗಳಲ್ಲಿ ಬಲಿತ ಕಾಯಿಗಳಿಗೆ ಬೂದು ಗೊಳೆ ಬರುವುದು.
ನಿರ್ವಹಣೆ
1) ಮಣ್ಣಿಗೆ 1 ಎಕರೆಗೆ 2 ಕ್ವಿoಟಾಲ್ ಕೃಷಿ ಸುಣ್ಣ ಕೊಡಿ
2) ಕಳೆದ ವರ್ಷ ಕೊಳೆ ಪೀಡಿತ ಸತ್ತ ಹಿಂಗಾರಗಳನ್ನು ತೆಗೆಯಿರಿ
5) ತಟಸ್ತ ಗೊಳಿಸಿದ ( ರಸಸಾರ 6.5 ರಿಂದ 7.5 ) ಶೇಕಡಾ 1 ರ ಬೋರ್ಡೊ ದ್ರಾವಣ ಸಿಂಪರಿಸಿ. ಇದಕ್ಕೆ ಬದಲಾಗಿ ಶೇ. O.25 ರ ( 200 ಲೀಟರ್ ನೀರಿಗೆ 500 ಗ್ರಾಂ ) ತಾಮ್ರದ ಆಕ್ಸಿಕ್ಲೋರೈಡ್ ಅಥವಾ ಶೇo.2ರ ( 200 ಲೀಟರ್ ನೀರಿಗೆ 400ಗ್ರಾಂ ) ಮೆಟಲಕ್ಸಿಲ್ ಎಂ ಜಡ್ಸಿಂಪರಿಸಿ.) ಮಳೆ ಹೆಚ್ಚು ಬೀಳುವ ಪ್ರದೇಶಗಳಲ್ಲಿ ಬೋರ್ಡೋ ಸಿಂಪರಣೆ ನಂತರ ಪ್ಲಾಸ್ಟಿಕ್ ಕೊಟ್ಟೆ ಕಟ್ಟಬಹುದು.
Follow the ಅಡಿಕೆ ಬೆಳೆಗಾರರ ಚಾನೆಲ್ channel on WhatsApp: https://whatsapp.com/channel/0029Va6CXv17dmeYrgQil235
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ