ಭಾನುವಾರ, ಡಿಸೆಂಬರ್ 31, 2023

ಮುಂದಿನ-ಜೆನ್ ಸೋಲಾರ್ ಪ್ಯಾನಲ್‌ಗಳು: ಚಿಕ್ಕದು, ಅಗ್ಗದ, ಹೆಚ್ಚು ಪರಿಣಾಮಕಾರಿ

  • ಹೊಸ ಕೋಶಗಳು ಕೂದಲಿನ ಎಳೆಗಿಂತ ಎರಡು ಪಟ್ಟು ದಪ್ಪವಾಗಿದ್ದು, ಎಲೆಕ್ಟ್ರೋಡ್‌ಗಳಿಂದ ಉಂಟಾಗುವ ನೆರಳನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ ಮತ್ತು ಶಕ್ತಿ ಉತ್ಪಾದನೆಯ ಸಾಮರ್ಥ್ಯವನ್ನು ಮೂರು ಪಟ್ಟು ಹೆಚ್ಚಿಸುತ್ತದೆ.
  • ಕೆನಡಿಯನ್ ಮತ್ತು ಫ್ರೆಂಚ್ ಸಂಸ್ಥೆಗಳ ನಡುವಿನ ಸಹಯೋಗದ ಯೋಜನೆಯು ಎಲೆಕ್ಟ್ರಾನಿಕ್ ಸಾಧನದ ಚಿಕಣಿಕರಣದಲ್ಲಿ ಮಹತ್ವದ ಹೆಜ್ಜೆಯನ್ನು ಗುರುತಿಸುತ್ತದೆ ಮತ್ತು ಬಾಹ್ಯಾಕಾಶ ಪರಿಶೋಧನೆ ಮತ್ತು ದೂರಸಂಪರ್ಕ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಅಪ್ಲಿಕೇಶನ್‌ಗಳನ್ನು ಹೊಂದಿದೆ.
  • ಅಂತರರಾಷ್ಟ್ರೀಯ ಮತ್ತು ರಾಷ್ಟ್ರೀಯ ನಿಧಿಯಿಂದ ಬೆಂಬಲಿತವಾದ ಈ ತಾಂತ್ರಿಕ ಪ್ರಗತಿಯು ಹೆಚ್ಚು ಸಮರ್ಥನೀಯ ಮತ್ತು ಡಿಜಿಟಲ್ ವರ್ಧಿತ ಪ್ರಪಂಚದ ಕಡೆಗೆ ಬದಲಾವಣೆಯಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ ಎಂದು ನಿರೀಕ್ಷಿಸಲಾಗಿದೆ.

ಒಟ್ಟಾವಾ ವಿಶ್ವವಿದ್ಯಾನಿಲಯದ ಎಂಜಿನಿಯರ್‌ಗಳು, ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಪಾಲುದಾರರೊಂದಿಗೆ, ಮೊದಲ ಬ್ಯಾಕ್-ಕಾಂಟ್ಯಾಕ್ಟ್ ಮೈಕ್ರೋಮೆಟ್ರಿಕ್ ದ್ಯುತಿವಿದ್ಯುಜ್ಜನಕ ಕೋಶಗಳನ್ನು ತಯಾರಿಸುವ ಮೂಲಕ ಜಗತ್ತನ್ನು ಮೊದಲು ಸಾಧಿಸಿದ್ದಾರೆ.

ಕೋಶಗಳು, ಕೂದಲಿನ ಎಳೆಗಿಂತ ಎರಡು ಪಟ್ಟು ದಪ್ಪವನ್ನು ಹೊಂದಿದ್ದು, ಸಾಂಪ್ರದಾಯಿಕ ಸೌರ ತಂತ್ರಜ್ಞಾನಗಳಿಗಿಂತ ಗಮನಾರ್ಹ ಪ್ರಯೋಜನಗಳನ್ನು ಹೊಂದಿವೆ, ಎಲೆಕ್ಟ್ರೋಡ್-ಪ್ರೇರಿತ ನೆರಳುಗಳನ್ನು 95% ರಷ್ಟು ಕಡಿಮೆ ಮಾಡುತ್ತದೆ ಮತ್ತು ಶಕ್ತಿಯ ಉತ್ಪಾದನಾ ವೆಚ್ಚವನ್ನು ಮೂರು ಪಟ್ಟು ಕಡಿಮೆ ಮಾಡುತ್ತದೆ

ಸೆಲ್ ರಿಪೋರ್ಟ್ಸ್ ಫಿಸಿಕಲ್ ಸೈನ್ಸ್ ಎಂಬ ಜರ್ನಲ್‌ನಲ್ಲಿ ವರದಿ ಮಾಡುವ ಪ್ರಬಂಧವನ್ನು ಪ್ರಕಟಿಸಲಾಗಿದೆ .

 ತಾಂತ್ರಿಕ ಪ್ರಗತಿ - ಒಟ್ಟಾವಾ ವಿಶ್ವವಿದ್ಯಾನಿಲಯದಲ್ಲಿ ಪೋಸ್ಟ್‌ಡಾಕ್ಟರಲ್ ಸಂಶೋಧಕ ಮತ್ತು ಅರೆಕಾಲಿಕ ಭೌತಶಾಸ್ತ್ರದ ಪ್ರಾಧ್ಯಾಪಕ ಮ್ಯಾಥ್ಯೂ ಡಿ ಲಫೊಂಟೈನ್ ನೇತೃತ್ವದಲ್ಲಿ; ಮತ್ತು ಕರಿನ್ ಹಿಂಜರ್, ವೈಸ್-ಡೀನ್, ಸಂಶೋಧನೆ, ಮತ್ತು ಫೋಟೊನಿಕ್ ಡಿವೈಸಸ್‌ನಲ್ಲಿ ಯೂನಿವರ್ಸಿಟಿ ರಿಸರ್ಚ್ ಚೇರ್ ಫಾರ್ ಎನರ್ಜಿ ಫಾರ್ ಇಂಜಿನಿಯರಿಂಗ್ ಫ್ಯಾಕಲ್ಟಿಯಲ್ಲಿ - ಎಲೆಕ್ಟ್ರಾನಿಕ್ ಸಾಧನಗಳ ಕ್ಷೇತ್ರದಲ್ಲಿ ಮಿನಿಯೇಟರೈಸೇಶನ್‌ನ ಹೊಸ ಯುಗಕ್ಕೆ ದಾರಿ ಮಾಡಿಕೊಡುತ್ತದೆ.

US ಶೇಲ್ ಬೆಳವಣಿಗೆಯು 2024 ರಲ್ಲಿ ದ್ಯುತಿವಿದ್ಯುಜ್ಜನಕ ಕೋಶ ಉತ್ಪಾದನಾ ಪ್ರಕ್ರಿಯೆಯು ಒಟ್ಟಾವಾ ವಿಶ್ವವಿದ್ಯಾನಿಲಯ, ಕ್ವಿಬೆಕ್‌ನಲ್ಲಿರುವ ಯೂನಿವರ್ಸಿಟಿ ಡೆ ಶೆರ್‌ಬ್ರೂಕ್ ಮತ್ತು ಫ್ರಾನ್ಸ್‌ನ ಗ್ರೆನೋಬಲ್‌ನಲ್ಲಿರುವ ಲ್ಯಾಬೋರಾಟೊಯಿರ್ ಡೆಸ್ ಟೆಕ್ನಾಲಜೀಸ್ ಡೆ ಲಾ ಮೈಕ್ರೋಎಲೆಕ್ಟ್ರೋನಿಕ್ ನಡುವಿನ ಪಾಲುದಾರಿಕೆಯನ್ನು ಒಳಗೊಂಡಿತ್ತು.

"ಈ ಮೈಕ್ರೋಮೆಟ್ರಿಕ್ ದ್ಯುತಿವಿದ್ಯುಜ್ಜನಕ ಕೋಶಗಳು ಅತ್ಯಂತ ಚಿಕ್ಕ ಗಾತ್ರ ಮತ್ತು ಗಮನಾರ್ಹವಾಗಿ ಕಡಿಮೆಯಾದ ನೆರಳು ಸೇರಿದಂತೆ ಗಮನಾರ್ಹ ಗುಣಲಕ್ಷಣಗಳನ್ನು ಹೊಂದಿವೆ. ಆ ಗುಣಲಕ್ಷಣಗಳು ಎಲೆಕ್ಟ್ರಾನಿಕ್ ಸಾಧನಗಳ ಸಾಂದ್ರತೆಯಿಂದ ಹಿಡಿದು ಸೌರ ಕೋಶಗಳಂತಹ ಪ್ರದೇಶಗಳಿಗೆ, ಬಾಹ್ಯಾಕಾಶ ಪರಿಶೋಧನೆಗಾಗಿ ಹಗುರವಾದ ಪರಮಾಣು ಬ್ಯಾಟರಿಗಳು ಮತ್ತು ದೂರಸಂಪರ್ಕ ಮತ್ತು ವಸ್ತುಗಳ ಇಂಟರ್ನೆಟ್‌ಗಾಗಿ ಸಾಧನಗಳ ಚಿಕಣಿಕರಣದವರೆಗೆ ವಿವಿಧ ಅಪ್ಲಿಕೇಶನ್‌ಗಳಿಗೆ ಸಾಲ ನೀಡುತ್ತವೆ, ”ಹಿಂಜರ್ ಹೇಳಿದರು.

ದೊಡ್ಡ ಸಾಮರ್ಥ್ಯದೊಂದಿಗೆ ಒಂದು ಪ್ರಗತಿ

 ಡಿ ಲಾಫೊಂಟೈನ್ ಸೇರಿಸಲಾಗಿದೆ, "ಈ ತಾಂತ್ರಿಕ ಪ್ರಗತಿಯು ಸಮಾಜಕ್ಕೆ ಗಮನಾರ್ಹ ಪ್ರಯೋಜನಗಳನ್ನು ನೀಡುತ್ತದೆ. ಕಡಿಮೆ ದುಬಾರಿ, ಹೆಚ್ಚು ಶಕ್ತಿಶಾಲಿ ಸೌರ ಕೋಶಗಳು ಶಕ್ತಿಯ ಬದಲಾವಣೆಯನ್ನು ವೇಗಗೊಳಿಸಲು ಸಹಾಯ ಮಾಡುತ್ತದೆ. ಹಗುರವಾದ ಪರಮಾಣು ಬ್ಯಾಟರಿಗಳು ಬಾಹ್ಯಾಕಾಶ ಪರಿಶೋಧನೆಯನ್ನು ಸುಗಮಗೊಳಿಸುತ್ತದೆ ಮತ್ತು ಸಾಧನಗಳ ಚಿಕಣಿಗೊಳಿಸುವಿಕೆಯು ವಸ್ತುಗಳ ಅಂತರ್ಜಾಲದ ಬೆಳವಣಿಗೆಗೆ ಕೊಡುಗೆ ನೀಡುತ್ತದೆ ಮತ್ತು ಹೆಚ್ಚು ಶಕ್ತಿಶಾಲಿ ಕಂಪ್ಯೂಟರ್‌ಗಳು ಮತ್ತು ಸ್ಮಾರ್ಟ್‌ಫೋನ್‌ಗಳಿಗೆ ಕಾರಣವಾಗುತ್ತದೆ. ಈ ಮೊದಲ ಬ್ಯಾಕ್-ಕಾಂಟ್ಯಾಕ್ಟ್ ಮೈಕ್ರೋಮೆಟ್ರಿಕ್ ದ್ಯುತಿವಿದ್ಯುಜ್ಜನಕ ಕೋಶಗಳ ಅಭಿವೃದ್ಧಿಯು ಎಲೆಕ್ಟ್ರಾನಿಕ್ ಸಾಧನಗಳ ಚಿಕಣಿಕರಣದಲ್ಲಿ ನಿರ್ಣಾಯಕ ಹಂತವಾಗಿದೆ.

ಹಿಂಜರ್ ಅವರು, "ಕಾರ್ಬನ್-ತಟಸ್ಥ ಆರ್ಥಿಕತೆಗೆ ಬದಲಾಯಿಸುವಲ್ಲಿ ಅರೆವಾಹಕಗಳು ಪ್ರಮುಖವಾಗಿವೆ. ಈ ಯೋಜನೆಯು ನಮ್ಮ ಸಾಮಾಜಿಕ ಗುರಿಗಳನ್ನು ಸಾಧಿಸಲು ಇಂಜಿನಿಯರಿಂಗ್ ಫ್ಯಾಕಲ್ಟಿಯಲ್ಲಿ ನಾವು ಕೈಗೊಳ್ಳುತ್ತಿರುವ ಅನೇಕ ಸಂಶೋಧನಾ ಉಪಕ್ರಮಗಳಲ್ಲಿ ಒಂದಾಗಿದೆ.

ಇಂಜಿನಿಯರಿಂಗ್ ಫ್ಯಾಕಲ್ಟಿಯಲ್ಲಿನ ಐದು ಸಂಶೋಧನಾ ಕ್ಷೇತ್ರಗಳಲ್ಲಿ ಮೂರರಲ್ಲಿ ಸೆಮಿಕಂಡಕ್ಟರ್‌ಗಳನ್ನು ಸೇರಿಸಲಾಗಿದೆ, ಅವುಗಳೆಂದರೆ, ಮಾಹಿತಿ ತಂತ್ರಜ್ಞಾನಗಳು, ಫೋಟೊನಿಕ್ಸ್ ಮತ್ತು ಉದಯೋನ್ಮುಖ ವಸ್ತುಗಳು, ಮತ್ತು ಒಟ್ಟಾವಾ ವಿಶ್ವವಿದ್ಯಾನಿಲಯದ ಸಂಶೋಧನೆಯ ನಾಲ್ಕು ಕಾರ್ಯತಂತ್ರದ ಕ್ಷೇತ್ರಗಳಲ್ಲಿ ಎರಡು, ಅವುಗಳೆಂದರೆ, ಸಮರ್ಥನೀಯ ವಾತಾವರಣವನ್ನು ಸೃಷ್ಟಿಸುವುದು ಮತ್ತು ರೂಪಿಸುವುದು ಡಿಜಿಟಲ್ ಪ್ರಪಂಚ.

ಕೆನಡಾ ಮತ್ತು ಫ್ರಾನ್ಸ್ ನಡುವಿನ ಈ ಅಂತರಾಷ್ಟ್ರೀಯ ಪಾಲುದಾರಿಕೆಯು ಸೂಕ್ಷ್ಮ ಉತ್ಪಾದನೆಯಲ್ಲಿ ನಾವೀನ್ಯತೆ ಮತ್ತು ಸಂಶೋಧನೆಯ ಪ್ರಾಮುಖ್ಯತೆಯನ್ನು ವಿವರಿಸುತ್ತದೆ, ತಂತ್ರಜ್ಞಾನವು ಹಿಂದೆಂದಿಗಿಂತಲೂ ಹೆಚ್ಚು ಶಕ್ತಿಯುತ ಮತ್ತು ಪ್ರವೇಶಿಸಬಹುದಾದ ಭವಿಷ್ಯಕ್ಕೆ ದಾರಿ ಮಾಡಿಕೊಡುತ್ತದೆ.


ಗುರುವಾರ, ಅಕ್ಟೋಬರ್ 26, 2023

ಅಡಿಕೆ ಬೆಳೆಗಾರರಿಗಷ್ಟೇ ಅಲ್ಲ, 'ಕೇಣಿ' ಮಾಡೋ ಕೇಣಿದಾರರಿಗೂ ಎದುರಾಯ್ತು ಭಾರೀ ದೊಡ್ಡ ಸಂಕಷ್ಟ !!

ಡಿಕೆ ಬೆಳೆಗಾರರಿಗಷ್ಟೇ(Arecanut Growers)ಅಲ್ಲದೇ, ಕೇಣಿ’ ಮಾಡುವ ಕೇಣಿದಾರರಿಗೂ ಭಾರೀ ದೊಡ್ಡ ಸಂಕಷ್ಟ(Arecanut growers problem) ಎದುರಾಗಿದೆ. ಬಸವಾಪಟ್ಟಣದಲ್ಲಿ ಅನಾವೃಷ್ಟಿಯಿಂದ ಈ ಭಾರೀ ನಷ್ಟ ಉಂಟಾಗಿದ್ದು, ಈ ವರ್ಷ ಮಳೆಯ ಅಭಾವದ ಪರಿಣಾಮ ಅಡಿಕೆ ಫಸಲಿನ ಇಳುವರಿ ಶೇಕಡ 40ರಷ್ಟು ಕುಸಿತ ಕಂಡಿದೆ.

ಪ್ರತಿ ವರ್ಷ ಎಕರೆಗೆ ಸರಾಸರಿ 10 ಕ್ವಿಂಟಾಲಲ್‌ನಷ್ಟು ಅಡಿಕೆ ದೊರೆಯುತ್ತಿತ್ತು. ಈ ವರ್ಷ ಕೇವಲ 5 ಕ್ವಿಂಟಲ್‌ಗೆ ಇಳಿಕೆ ಕಂಡಿದ್ದು, ಅಡಿಕೆಯ ತೂಕ ಕೂಡ ಕಡಿಮೆಯಾಗಿದೆ. ಒಂದು ಚೀಲ ಅಡಿಕೆ 80ರಿಂದ 85 ಕೆ.ಜಿ. ತೂಗುತ್ತಿದ್ದಲ್ಲಿ ಈಗ 60ರಿಂದ 65 ಕೆ.ಜಿ.ಯಷ್ಟಾಗಿದೆ. ಬಸವಾಪಟ್ಟಣ ಸುತ್ತಲಿನ ಗ್ರಾಮಗಳ ನೂರಾರು ಎಕರೆ ಅಡಿಕೆ ತೋಟಗಳನ್ನು ಕೇಣಿ ಪಡೆದು, ಮರಗಳಿಂದ ಅಡಿಕೆ ಕೊಯ್ದು ಕಣಗಳಿಗೆ ಸಾಗಿಸಿ ಸುಲಿಯುವುದು, ಬೇಯಿಸುವುದು, ಒಣಗಿಸುವ ಕೆಲಸವನ್ನು ಕೇಣಿದಾರರು ಮಾಡಿಸುತ್ತಾರೆ. ಆದರೆ, ಒಣಗಿಸಿದ ಕೂಡಲೇ ಮಾರಾಟ ಮಾಡಲಾಗದು. ದರ ಹೆಚ್ಚಾಗುವವರೆಗೆ ಕಾಯಬೇಕಾಗುತ್ತದೆ. ಇದರಿಂದ ಕೆಲವು ದಿನ ಅಡಿಕೆ ಇಟ್ಟರು ಕೂಡ ತೂಕ ಕಡಿಮೆಯಾಗುತ್ತದೆ.

‘ಪ್ರತಿ ವರ್ಷ ಜೂನ್ ತಿಂಗಳಲ್ಲಿ ಕೇಣಿದಾರರು, ರೈತರ ತೋಟಗಳನ್ನು ಕೇಣಿ ಹಿಡಿಯುತ್ತಾರೆ. ರೈತರೊಂದಿಗೆ ದರ ನಿಗದಿ ಮಾಡಿಕೊಂಡು ಮುಂಗಡ ಕೇಣಿದಾರರು ಮುಂಗಡ ನೀಡುತ್ತಾರೆ. ಆದ್ರೆ, ಈ ನಡುವೆ, ರೈತರಿಗೆ ಲಾಭ ಬಾರದೇ ಹೋದರು ಕೇಣಿದಾರರು ಹಣ ನೀಡಲೇಬೇಕು. ರೈತರು ಒಪ್ಪಂದದ ಪ್ರಕಾರ ಹಣ ವಸೂಲಿ ಮಾಡುತ್ತಾರೆ. ಹಣ ಕೊಡುವುದು ತಡವಾದರೆ, ಕೇಣಿದಾರರಿಗೆ ಕಪ್ಪು ಪಟ್ಟಿಗೆ ಸೇರಿಸಿ ಮತ್ತೆ ಮುಂದಿನ ವರ್ಷ ಕೇಣಿ ಕೊಡುವುದಿಲ್ಲ. ಇದರಿಂದಾಗಿ ಸತತ ಎರಡು ವರ್ಷದಿಂದ ನಷ್ಟವಾಗುತ್ತಿದೆ’ ಎಂದು ಕಣಿವೆಬಿಳಚಿ ಗ್ರಾಮದ ಕೇಣಿದಾರರೊಬ್ಬರು ಮಾಧ್ಯಮವೊಂದಕ್ಕೆ ಮಾಹಿತಿ ನೀಡಿದ್ದಾರೆ. ಜೂನ್‌ನಿಂದ ಜನವರಿವರೆಗೆ ಅಡಿಕೆ ಕೊಯ್ಲು, ಸಾಗಣೆ, ಹಸಿ ಅಡಿಕೆ ಸುಲಿದು ಬೇಯಿಸುವುದು, ಒಣಗಿಸುವುದು, ಪ್ರತ್ಯೇಕಿಸಿ ಚೀಲ ತುಂಬುವುದಕ್ಕೆ ಅಂದಾಜು 600 ಜನ ಮಹಿಳೆಯರಿಗೆ, 400 ಜನ ಪುರುಷರಿಗೆ ಕೇಣಿದಾರರು ಕೆಲಸ ನೀಡುತ್ತಾರೆ. ಕೇಣಿದಾರರಿಗೆ ಹಾಕಿದ ಬಂಡವಾಳವೂ ದೊರೆಯುತ್ತಿಲ್ಲ’ ಎಂದು ಕೇಣಿದಾರರೊಬ್ಬರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: Gujarat Garba Dance: ನವರಾತ್ರಿ ಗರ್ಬಾ ಡ್ಯಾನ್ಸ್ ಎಫೆಕ್ಟ್- 24 ತಾಸಿನಲ್ಲಿ 10 ಜನರ ಬಲಿ ಪಡೆದ ಹೃದಯಾಘಾತ !!

Follow the ಅಡಿಕೆ ಬೆಳೆಗಾರರ ಚಾನೆಲ್ channel on WhatsApp: https://whatsapp.com/channel/0029Va6CXv17dmeYrgQil235


ಅಡಿಕೆ ಸಿಪ್ಪೆ ಅತ್ಯುತ್ತಮ ಶಬ್ದ ನಿರೋಧಕ

Arecanut

ಅಡಿಕೆ ಬೆಳೆಗಾರರಿಗೆ ಮತ್ತೊಂದು ಸಿಹಿ ಸುದ್ದಿ ಇದೆ. ಅಡಿಕೆಯ ವಿವಿಧ ಬಳಕೆಯ ಬಗ್ಗೆ ಈಗಾಗಲೇ ಹಲವು ಪ್ರಯತ್ನ ನಡೆಯುತ್ತಿದೆ. ಇದೀಗ ಅಡಿಕೆ ಸಿಪ್ಪೆಯ ಬಳಕೆಯಲ್ಲಿ ಇನ್ನೊಂದು ಸಂಶೋಧನಾ ವರದಿ ಬಹಿರಂಗವಾಗಿದೆ. ಶಬ್ದಗಳನ್ನು ತಡೆಯುವಲ್ಲಿಯೂ ಅಡಿಕೆ ಸಿಪ್ಪೆ ಪರಿಣಾಮಕಾರಿಯಾಗಿದೆ ಎಂಬುದನ್ನು ಸುರತ್ಕಲ್ನ ನ್ಯಾಷನಲ್ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಕರ್ನಾಟಕ (NITK) ನಡೆಸಿದ ಸಂಶೋಧನೆಯಿಂದ ತಿಳಿದುಬಂದಿದೆ.

ಅಡಿಕೆ ಬೆಳೆಗಾರರು ಅಡಿಕೆಯ ಸುಲಿದ ನಂತರ ಸಿಪ್ಪೆಯನ್ನು ತ್ಯಾಜ್ಯವಾಗಿ ಬಳಕೆ ಮಾಡುತ್ತಾರೆ. ಅನೇಕರು ಬೆಂಕಿ ಹಾಕಿದರೆ, ಕೆಲವರು ಗೊಬ್ಬರವಾಗಿ ಬಳಕೆ ಮಾಡುತ್ತಾರೆ. ಗೊಬ್ಬರವಾಗಿ ಬಳಕೆ ಮಾಡುವಾಗಲೂ ಹಲವು ವಿಧಾನಗಳನ್ನು ಅನುಸರಿಸಬೇಕಿದೆ. ಅಡಿಕೆ ಸಿಪ್ಪೆಯನ್ನು ಸೊಳ್ಳೆ ನಿಯಂತ್ರಕ ಕಾಯಿಲ್‌ ಆಗಿಯೂ ಬಳಕೆ ಮಾಡುವ ಪ್ರಯತ್ನ ನಡೆದಿದೆ. ಇದೀಗ ಇನ್ನೂ ಒಂದು ಅಧ್ಯಯನ ನಡೆದಿದೆ, ಆಡಿಟೋರಿಯಂ ಅಥವಾ ಮೀಟಿಂಗ್ ಹಾಲ್ನಲ್ಲಿ ಬರುವ ಅನಗತ್ಯ ಶಬ್ದಗಳನ್ನು ತಡೆಯುವಲ್ಲಿಯೂ ಅಡಿಕೆ ಸಿಪ್ಪೆ ಪರಿಣಾಮಕಾರಿಯಾಗಿದೆ ಎಂಬುದನ್ನು ಸುರತ್ಕಲ್ನ ನ್ಯಾಷನಲ್ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (NITK) ಸಂಶೋಧನಾ ವಿದ್ಯಾರ್ಥಿಗಳು ನಡೆಸಿದ ಸಂಶೋಧನೆಯಿಂದ ಬಹಿರಂಗವಾಗಿದೆ.

ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದ ಪ್ರೊ.ಪಿ.ಜಯರಾಜ್ ನೇತೃತ್ವದ ಸಂಶೋಧಕರು ಈ ಸಂಶೋಧನೆಯನ್ನು ನಡೆಸಿದ್ದಾರೆ. ಶಬ್ದ ನಿರೋಧಕ ಬೋರ್ಡ್ಗಳನ್ನು ರಚಿಸುವ ಮೂಲಕ ಶಬ್ದ ನಿರೋಧಕವಾಗಿ ಬಳಕೆ ಮಾಡಬಹುದು ಎಂದು ವರದಿಯಲ್ಲಿ ತಿಳಿಸಿದ್ದಾರೆ. ಅನಗತ್ಯ ಶಬ್ದವನ್ನು ನಿಯಂತ್ರಿಸಲು ಶಬ್ದ ಹೀರಿಕೊಳ್ಳುವ ವಸ್ತುಗಳನ್ನು ಬಳಸಲಾಗುತ್ತದೆ. ಈಗ ಪ್ಲಾಸ್ಟಿಕ್‌ ವಸ್ತುಗಳನ್ನು, ಮಡಕೆ, ಬೋರ್ಡ್‌ ಇತ್ಯಾದಿಗಳ ಬಳಕೆ ಮಾಡಲಾಗುತ್ತದೆ. ಆದರೆ ಅಡಿಕೆಯ ಸಿಪ್ಪೆ ಪರಿಸರ ಸ್ನೇಹಿಯೂ ಆಗಿದ್ದು, ಯಾವುದೇ ಸಮಸ್ಯೆ ಇಲ್ಲ ಎನ್ನುವುದು ವರದಿ.

“ಶಬ್ದ ಫಲಕಗಳನ್ನು ಹೆಚ್ಚು ಪರಿಸರ ಸ್ನೇಹಿ ಮತ್ತು ಜೈವಿಕ ಸಂಯೋಜನೆಯನ್ನಾಗಿ ಮಾಡಲು, ಸಂಸ್ಥೆಯ ವಿದ್ಯಾರ್ಥಿಗಳು ಮತ್ತು ಸಂಶೋಧಕರನ್ನು ಒಳಗೊಂಡ ತಂಡವು ಅಡಿಕೆ ಹೊಟ್ಟನ್ನು ಅನ್ವೇಷಿಸಲು ಪ್ರಾರಂಭಿಸಿತು. ಅದರಂತೆ ಫಲಿತಾಂಶವು ಸಕಾರಾತ್ಮಕವಾಗಿ ಬಂದಿದೆ” ಎಂದು ಜಯರಾಜ್ ಹೇಳಿದ್ದಾರೆ.

Follow the ಅಡಿಕೆ ಬೆಳೆಗಾರರ ಚಾನೆಲ್ channel on WhatsApp: https://whatsapp.com/channel/0029Va6CXv17dmeYrgQil235

ಮಂಗಳವಾರ, ಅಕ್ಟೋಬರ್ 24, 2023

ಅಡಿಕೆ ತೋಟ ಯಾವಾಗಲೂ ಆರೋಗ್ಯವಾಗಿರಬೇಕು ಎಂದರೆ ಈ ಕೆಲಸ ಮಾಡೋದು ಮರೆಯಬೇಡಿ

Agriculture: ಒಬ್ಬ ರೈತನಿಗೆ ಅಡಿಕೆ ತೋಟ ಇದ್ದರೆ ಹೆಚ್ಚಿನ ಲಾಭ ಗಳಿಸಲು ಎನ್ನುತ್ತಾರೆ. ರೈತನ 5 ಎಕರೆ ಅಡಿಕೆ ತೋಟವಿದ್ದರೆ ಆತನ ನಿವ್ವಳ ಆದಾಯ 10 ಲಕ್ಷ ರೂ. ಎಂದು ಪರಿಗಣಿಸ ಬಹುದು. ಹಾಗಿದ್ರೆ ಇದರ ಖರ್ಚು ಯಾವ ರೀತಿ ಇರುತ್ತೆ? ಖರ್ಚು ಎಂಬುದು ಆಯಾಯ ರೈತರ ಕೃಷಿ ವಿಧಾನದ ಮೇಲೆ ಅವಲಂಭಿಕೆ ಆಗಿರುತ್ತದೆ. ತೋಟ ವನ್ನು ಸರಿಯಾಗಿ ನಿರ್ವಹಣೆ ಮಾಡಿದ್ರೆ ಖರ್ಚು ಕಮ್ಮಿಯೆ ಎಂದು ಹೇಳಬಹುದು.ಅಡಿಕೆ ತೋಟಕ್ಕೆ ಸರಿಪ್ರಮಾಣದ ಮಣ್ಣು, ನೀರು, ಪೋಷಣೆ ಸಿಕ್ಕರೆ ಹೆಚ್ಚು ಆದಾಯ ಬೇರೆ ಯಾವ ಬೆಳೆಯಲ್ಲಿಯೂ ಬರಲು ಸಾಧ್ಯವೇ ಇಲ್ಲ.

ಏನು ಮಾಡಬೇಕು?

ಅಡಿಕೆ ತೋಟದಲ್ಲಿ ಹೆಚ್ಚಿನ ಫಸಲು ಸಿಗಬೇಕಾದರೆ ಸರಿಯಾದ ನೀರು ಪೂರೈಕೆ ಆಗಬೇಕು, ಗಾಳಿ, ಬೆಳಕು ಸರಿಯಾಗಿ ಬೀಳಬೇಕು. ಮುಖ್ಯವಾಗಿ ಅಲ್ಲೆ ಬೀಳುವ ಕಸ ಕಡ್ಡಿ, ಹಾಳೆ ಇತ್ಯಾದಿಗಳನ್ನು ಗೊಬ್ಬರವಾಗಿ ಮಣ್ಣಿನ ಸೇರುವಂತೆ ಮಾಡಬೇಕು. ರಸಾಯನಿಕ ಗೊಬ್ಬರ ಬಳಸಲೇ ಬಾರದು. ಸಾವಯವ ಗೊಬ್ಬರ ಹಾಕುವ ಮೂಲಕ ನಿಮ್ಮ ತೋಟವನ್ನು ಆರೋಗ್ಯ ಕರವಾಗಿ ಇಡಬಹುದಾಗಿದೆ.

ಹರಳು ಉದುರುವಿಕೆ ಯಾಕೆ?

ಕೆಲವು ತೋಟಗಳಲ್ಲಿ ನೀರಿನ ತೇವಾಂಶ ಹೆಚ್ಚಾದರೂ ಹರಳು ಉದುರುವಿಕೆ ಉಂಟಾಗುತ್ತದೆ. ತೋಟಗಳಲ್ಲಿ ಶೀತದ ವಾತಾವರಣ ದಿಂದ ಹರಳು ಉದುರುವ ಬಾಧೆ ಕಂಡು ಬರುತ್ತದೆ. ಒಂದು‌ ವೇಳೆ ಅಡಿಕೆ ಗಿಡದ ಎಲೆಗಳು ಹಳದಿ ಬಣಕ್ಕೆ ತಿರುಗಿದರೆ, ಕ್ಯಾಲ್ಸಿಯಂ ನೈಟ್ರೇಟ್ಆನ್ನು ನೀರಿಗೆ ಬೆರೆಸಿ ಸಿಂಪಡಿಸಬಹುದು. ಹರಳು ಉದುರುವಿಕೆಗೆ ನೀರು ಬಸಿಯದ ತೋಟಗಳಲ್ಲಿ ಕಾಲುವೆಗಳನ್ನು ಮಾಡಿ, ತೋಟದ ಸುತ್ತಲೂ ನಿಂತ ನೀರು ಕಾಲುವೆಗಳನ್ನು ಸ್ವಚ್ಚಗೊಳಿಸುವುದು ಮಾಡಬೇಕು.

ಇಳುವರಿ ಹೆಚ್ಚು.

ನೀವು ಅಡಿಕೆ ಗಿಡಗಳನ್ನು ಪ್ರೀತಿಯಿಂದ ನೋಡಿಕೊಳ್ಳುವುದು ಮುಖ್ಯ, ಅದ್ರೆ ಅಡಿಕೆ ಗಿಡಗಳು ಆರೋಗ್ಯ ವಾಗಿಡಲು ಗಿಡಕ್ಕೆ ಅನುಗುಣವಾದ ಪೋಷಕಾಂಶ ಗಳನ್ನು ನೀಡುವುದು. ಮನೆಯಲ್ಲಿಯೇ ಮಾಡಿದ ಗೊಬ್ಬರ ಹಾಕುವುದು.ನೀರು ನಿಲ್ಲದಂತೆ ನೋಡಿಕೊಳ್ಳುವುದು ಇತ್ಯಾದಿ ಮಾಡಿದ್ರೆ ಹೆಚ್ಚಿನ ಇಳುವರಿ ಕಾಣಲು ಸಾಧ್ಯ.

Follow the ಅಡಿಕೆ ಬೆಳೆಗಾರರ ಚಾನೆಲ್ channel on WhatsApp: https://whatsapp.com/channel/0029Va6CXv17dmeYrgQil235

ಭಾನುವಾರ, ಏಪ್ರಿಲ್ 2, 2023

ನಟಿ ಶೃತಿ ಕ್ಯಾಸನೂರು ನಾಟಿ ಅಡಿಕೆ ತೋಟ ಫುಲ್ ವೈರಲ್

ಕನ್ನಡ ಚಿತ್ರರಂಗ ಕಂಡ ಶ್ರೇಷ್ಠ ನಟಿಯರಲ್ಲಿ ಅಗ್ರಗಣ್ಯರಲ್ಲಿ ಒಬ್ಬರಾದ ನಟಿ ಶ್ರುತಿ ಅವರ ಬಗ್ಗೆ ನಾವು ಹೇಳಹೊರಟಿರುವುದು. ಭಾವನಾತ್ಮಕ ಪಾತ್ರಗಳನ್ನು ಇವರಿಗಿಂತ ಚೆನ್ನಾಗಿ ನಿರ್ವಹಿಸಬಲ್ಲ ನಟಿ ಇಡೀ ಭಾರತೀಯ ಚಿತ್ರರಂಗದಲ್ಲೇ ಇಲ್ಲ ಎನ್ನಬಹುದು. ಇವರು ಕೇವಲ ಕನ್ನಡ ಚಿತ್ರರಂಗ ಮಾತ್ರವಲ್ಲದೆ ತಮಿಳು, ತೆಲುಗು, ಮಲಯಾಳಂ ಚಿತ್ರರಂಗದಲ್ಲಿ ಕೂಡ ಕಾಣಿಸಿಕೊಂಡವರು. ಅಲ್ಲದೇ ರಾಜಕಾರಣದಲ್ಲೋ ತಮ್ಮದೇ ಆದ ಚಾಪು ಮೂಡಿಸಿದವರು. ಮಹಿಳೆಯಾಗಿ, ನಟಿಯಾಗಿ, ರಾಜಕಾರಣಿಯಾಗಿ, ಗೃಹಿಣಿಯಾಗಿರುವುದಲ್ಲದೇ ಈಗ ಕೃಷಿ ರಂಗದಲ್ಲೂ ತೊಡಗಿಸಿಕೊಂಡು ಅಡಿಕೆ ತೋಟ ಮಾಡಲು ಮುಂದಾಗಿದ್ದಾರೆ.
ಹೆಚ್ಚಿನ ಮಾಹಿತಿಗೆ:  ಕೆಜಿಎಫ್ ಯಶ್ ಅಡಿಕೆ ತೋಟ

ತಮ್ಮ ಜಮೀನಿನಲ್ಲಿ ಒಳ್ಳೆಯ ಬೆಳೆಮಾಡಬೇಕು ಅಂದುಕೊಂಡಿದ್ದ ಶೃತಿಯವರಿಗೆ ಅಪ್ಪು ಅವರು ಕ್ಯಾಸನೂರು ನಾಟಿ ತಳಿಯ ಅಡಿಕೆ ಬೆಳೆಯಲು ಸಲಹೆ ನೀಡಿದ್ದರಂತೆ. ತಂದೆ ಕೃಷ್ಣ ಅವರಿಗೂ ಇದೆ ಮನದಾಸೆಯಾಗಿತ್ತಂತೆ. ಇವರೆಲ್ಲರ ಸಲಹೆಯಂತೆ ಪತ್ರಕರ್ತ ಮಹಾಬಲೇಶ್ವರ ಅವರ ಸಲಹೆ ಮೆರೆಗೆ ಕ್ಯಾಸನೂರು ಅಡಿಕೆ ಸಸಿಗಳ ಬಗ್ಗೆ ವಿಚಾರಿಸಿ ಮಾಹಿತಿ ಕಲೆಹಾಕಿಕೊಂಡರು. ಅಧಿಕ ಇಳುವರಿ, ಸದೃಢ ಮರಗಳಾಗಿ ಬಾಳಿಕೆಬರಲು ಕ್ಯಾಸನೂರು ಅಡಿಕೆ ಸೂಕ್ತ ಎಂದು ಅರಿತುಕೊಂಡ ಕೋಡಲೇ ಕ್ಯಾಸನೂರು ಅಡಿಕೆ ಬೆಳೆಯುವ ಕ್ಯಾಸನೂರು ರಾಮಚಂದ್ರ ಕುಶೇನ್ ಇವರನ್ನ ದೂರವಾಣಿ ಮುಕಾಂತರ ಸಂಪರ್ಕಿಸಿ ಒಂದು ವರ್ಷ ಮೊದಲೇ ಅಡ್ವಾನ್ಸ್ ನೀಡಿ ಬುಕ್ ಮಾಡಿದ್ದರು. ಈಗ ಒಳ್ಳೆಯ ಗಿಡಗಳನ್ನು ತಂದು ನಾಟಿ ಮಾಡಿದ್ದಾರೆ.
ಇವರ ಪ್ರಮುಖ ಚಿತ್ರಗಳೆಂದರೆ ಗೌರಿ ಗಣೇಶ, ಅಕ್ಕ-ತಂಗಿ, ಕಲ್ಕಿ, ಗೌಡ್ರು, ಪುಟ್ಟಕ್ಕನ ಹೈವೇ ಇತ್ಯಾದಿ ಚಿತ್ರಗಳು ಅವರ ಸಿನಿ ಜೀವನದಲ್ಲಿ ಸಾಕಷ್ಟು ಮೆಚ್ಚುಗೆ ಪಡೆದ ಚಿತ್ರಗಳಾಗಿ ಮೂಡಿಬಂದಿದೆ.

ಕನ್ನಡದ ಒಂದು ಕಾಲದ ಟಾಪ್ ನಟಿ ಶ್ರುತಿ ಅವರ ನಿಜವಾದ ಹೆಸರು ಪ್ರಿಯದರ್ಶಿನಿ. ಮೂಲತಃ ಕಾರಾಂತಕದ ಹಾಸನ ಜಿಲ್ಲೆಯಲ್ಲಿ ಹುಟ್ಟಿದ ನಟಿ ಶ್ರುತಿ ರಂಗ ಭೂಮಿ ಯಲ್ಲಿ ಸಾಕಷ್ಟು ಕೆಲಸಗಳನ್ನು ಮಾಡಿ, ನಂತರ ಮಲಯಾಳಂ ಭಾಷೆಯ “ಸ್ವಂತಂ ಇನ್ನು ಕಾರುತಿ” ಸಿನಿಮಾದಲ್ಲಿ ಮೊದಲು ನಟನೆ ಮಾಡಿದರು. ಆ ನಂತರ ಆಸೆಗೊಬ್ಬ ಮೀಸೆಗೊಬ್ಬ ಚಿತ್ರದಲ್ಲಿ ಸಣ್ಣ ಪಾತ್ರ ಮಾಡಿದ್ದ ನಟಿ ಶ್ರುತಿ ಅವರ ಅದ್ಭುತ ನಟನೆಗೆ ಕರ್ನಾಟಕದ ಮನೆ ಮಾತಾದರು. ಆ ನಂತರ ಕನ್ನಡ, ತಮಿಳು, ತೆಲುಗು, ಮಲಯಾಳಂ ಸೇರಿ ಸುಮಾರು ೧೫೦ ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟನೆ ಮಾಡಿದ್ದಾರೆ ಶ್ರುತಿ. ಸದ್ಯ ಮಗಳ ಜೊತೆ ಮೈಸೂರಿನ ಹತ್ತಿರ ಇರುವ ತಮ್ಮ ತೋಟದಲ್ಲಿ ವಾಸವಾಗಿದ್ದಾರೆ.

ನಟಿ ಶ್ರುತಿ ಅವರು ಕರೋನ ಲಾಕ್ ಡೌನ್ ಆದ ಸಮಯದಲ್ಲಿ ಸಿನಿಮಾ ಚಿತ್ರೀಕರಣ ಇಲ್ಲದ ಕಾರಣ, ತಮ್ಮ ಮಗಳ ಜೊತೆ ಮೈಸೂರಿನ ಹತ್ತಿರ ಇರುವ ತಮ್ಮ 25 ಎಕರೆ ತೋಟದಲ್ಲಿ ವಾಸವಾಗಿದ್ದರು. ತಮ್ಮ ತೋಟದಲ್ಲಿ ಪರಿಸರ ಸ್ನೇಹಿ ಮನೆಯನ್ನು ಸಿಮೆಂಟ್ ಬಳಸದೆ, ಕೇವಲ ಕಲ್ಲು ಮಣ್ಣಿನಿಂದ ಸುಂದರವಾದ ಮನೆಯೊಂದನ್ನು ಕಟ್ಟಿದ್ದಾರೆ.

ಯಾವಾಗಲೂ ಸೋಶಿಯಲ್ ಮೀಡಿಯಾದಲ್ಲಿ ಬಹಳ ಆಕ್ಟಿವ್ ಇರುವ ಶೃತಿ ಅವರು ತಮ್ಮ ಅಭಿಮಾನಿಗಳೊಂದಿಗೆ ಅನೇಕ ವಿಡಿಯೋ ಫೋಟೋ ತುಣುಕುಗಳನ್ನು ಹಂಚಿಕೊಳ್ಳುತ್ತಾರೆ. ಹಾಗೇ ಶೃತಿಯವರು ತಾವು ತಮ್ಮ ತೋಟದಲ್ಲಿ ನಿರ್ಮಿಸಿದ ಮನೆಯ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ ಹೀಗೆ ಬರೆದು ಕೊಂಡಿದ್ದಾರೆ. “ಪರಿಸರ ಸ್ನೇಹಿ ಮನೆ ಇದು, ಸಿಮೆಂಟ್ ಬಳಸದೆ ಗೋಡೆಗೆ ಕೇವಲ ಕಲ್ಲು, ಮಣ್ಣು, ಚಾವಣಿಗೆ ಬಿದಿರು, ತೆಂಗಿನಗರಿ. ಇದಕ್ಕೆ ಇಂಜಿನಿಯರ್ರು ನಾನೇ, ಮೇಸ್ತ್ರಿನು ನಾನೇ ” ಎಂದು ಬರೆದಿದ್ದಾರೆ.
ಕೃಷಿಯಲ್ಲಿ ಆಸಕ್ತಿ ಇರುವ ಅವರು ಸಾವಯುವ ಕೃಷಿ ಮೂಲಕ ತಮ್ಮ ತೋಟದಲ್ಲಿ ಅನೇಕ ತರಕಾರಿ ಬೆಳೆಸಿದ್ದಾರೆ. ಈ ತೋಟದಲ್ಲಿ ಕೇವಲ ಮಹಿಳೆಯರೇ ಹೆಚ್ಚು ಕೆಲಸ ಮಾಡುತ್ತಾರೆ. ಅವರು ತಮ್ಮ ತೋಟದಲ್ಲಿ ಬೆಳೆದ ಮೊದಲ ಬೆಳೆಗೆ ತುಂಬಾ ಖುಷಿಗೊಂಡರು. ಹಾಗೂ ಅದರ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಬೆಳೆದಿದ್ದು ಸ್ವಲ್ಪವೇ ಆದರೂ ಆಗಿರುವ ಖುಷಿ ಮಾತ್ರ ಟನ್ ಗಟ್ಟಲೇ ಎಂದಿದ್ದಾರೆ.

http://surl.li/gbyap

Follow the ಅಡಿಕೆ ಬೆಳೆಗಾರರ ಚಾನೆಲ್ channel on WhatsApp: https://whatsapp.com/channel/0029Va6CXv17dmeYrgQil235

ಶನಿವಾರ, ಮಾರ್ಚ್ 11, 2023

ಅಡಿಕೆ ಕೃಷಿ…ಕೃಷಿ ಕ್ಷೇತ್ರದಲ್ಲಿ ಕಾಣುತ್ತಿದೆ ಮಹತ್ತರ ಬದಲಾವಣೆ!! ಕೃಷಿಕರು ಮೆಚ್ಚಿದ ಇದೊಂದು ತಳಿ-ಬೆಳೆಸುವುದು ಗೊತ್ತಾ!?

ಕೃಷಿ ಕ್ಷೇತ್ರದಲ್ಲಿ ದಿನಕ್ಕೊಂದು ಬದಲಾವಣೆ, ಹೊಸ ಹೊಸ ಪ್ರಯೋಗ, ಕೃಷಿ ವಿಜ್ಞಾನಿಗಳ ಅಧ್ಯಯನ, ಹೊಸ ಹೊಸ ತಳಿಗಳ ಪರಿಚಯ, ಸಾವಯವ-ರಸಾಯನಿಕ, ಇಳುವರಿ ಹೀಗೆ ಎಲ್ಲವೂ ಕಂಡು ಬರುತ್ತಿದೆ. ಈ ನಡುವೆ ಲಾಕ್ ಡೌನ್ ಬಳಿಕ ಪಟ್ಟಣಗಳಲ್ಲಿ ಬದುಕು ಕಟ್ಟಿಕೊಂಡ ಮಂದಿಯೂ ಹಳ್ಳಿಯಲ್ಲಿ ಕೃಷಿಗೆ ಮನಸೋತಿದ್ದು, ಪ್ರಮುಖವಾಗಿ ಅಡಿಕೆ ಬೆಳೆಗೆ ಮನಸೋತು ಅಡಿಕೆ ಗಿಡಗಳನ್ನು ಬೆಳೆಯುತ್ತಿರುವುದು ವಾಸ್ತವ.
ಕಳೆದ ಕೆಲ ವರ್ಷಗಳ ಹಿಂದೆ ಸಾಗರ ಸಮೀಪದ ಯುವಕರೊಬ್ಬರ ಅಡಿಕೆ ಕೃಷಿ ತೋಟ, ಅದರ ಬೆನ್ನಲ್ಲೇ ಸೊರಬ ಸಮೀಪದ ಲೇಪಾಕ್ಷದ ಯುವ ಉದ್ಯಮಿ ಒಬ್ಬರ ಕೃಷಿ ತೋಟದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ, ಮಾಧ್ಯಮದಲ್ಲಿ ಪ್ರಸಾರವಾಗಿ ಇನ್ನಷ್ಟು ಯುವಕರಲ್ಲಿ ಕೃಷಿಯ ಬಗ್ಗೆ ಅರಿವು ಮೂಡಿಸಿದ್ದು, ತೋಟದ ಕೆಲಸ ಲೇಸು ಎನ್ನುವಂತೆ ಮಾಡಿದೆ.
ಹೆಚ್ಚಿನ ಮಾಹಿತಿಗಾಗಿ ನೋಡಿ 👉 ಕ್ಯಾಸನೂರು ಅಡಿಕೆ ಪ್ರಸಿದ್ಧ ಅಡಿಕೆ
ಒಂದು ಕಾಲದಲ್ಲಿ ಮನೆಯಲ್ಲೇ ಇದ್ದು ತೋಟ ನೋಡಿಕೊಳ್ಳುವ ಯುವಕ ಎಂದರೆ ತಾತ್ಸಾರ ಭಾವದಿಂದ ಕಾಣುತ್ತಿದ್ದ ಮಂದಿ ಇಂದು ಪೇಟೆ ಪಟ್ಟಣಗಳಲ್ಲಿ ದುಡಿಯುವ ಯುವಕರ ಬಗ್ಗೆ ತಾತ್ಸಾರ ಮೂಡಿಸುವಂತೆ ಮಾಡಿದ್ದು, ಆ ಮಟ್ಟಕ್ಕೆ ಲಾಕ್ ಡೌನ್ ಬಳಿಕ ಅಡಿಕೆ-ತೋಟದ ಕೃಷಿ ಜನತೆಗೆ ಹಿಡಿಸಿದೆ. ಅಡಿಕೆ ಬೆಳೆದು ಬಂಗಾರದ ಜೀವನ ಕಟ್ಟಿಕೊಂಡ ಹಲವರು ನಮ್ಮ ನಡುವೆ ಇದ್ದು,ಅಡಿಕೆ ಕೃಷಿಯನ್ನು ಕಂದನಂತೆ ಪ್ರೀತಿಸುತ್ತಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ 👉 ಅಡಿಕೆ ಸಸಿಯಲ್ಲೂ ನಡೆಯುತ್ತೆ ಮೋಸ
ಇಂತಹ ಯುವ ಕೃಷಿಕರಿಗಾಗಿ ಇಲ್ಲೊಂದು ಮಾಹಿತಿ-ಅರಿವು ಮೂಡಿಸುವ ಬಗ್ಗೆ ವಿವರಿಸಲಾಗಿದ್ದು, ಹಲವು ಬಗೆಯ ತಳಿಗಳಲ್ಲಿ ಆಯಾ ಪ್ರದೇಶಗಳಿಗೆ ಯಾವ ತಳಿಗಳು ಸೂಕ್ತ ಎನ್ನುವ ವಿಚಾರವನ್ನು ಪ್ರಗತಿಪರ ಕೃಷಿಕರೆಂದು ಹಲವಾರು ಸನ್ಮಾನ-ಪುರಸ್ಕಾರಗಳನ್ನು ಪಡೆದ ಕೃಷಿಕರಿಂದ ತಿಳಿದು, ಆ ಮಾಹಿತಿಯನ್ನು ಇಲ್ಲಿ ವಿಸ್ತಾರವಾಗಿ ಬರೆಯಲಾಗಿದೆ. ಇಂದಿನ ಕಾಲದಲ್ಲಿ ಮಲೆನಾಡು ಭಾಗದಲ್ಲಿ ಕ್ಯಾಸನೂರು ಸೀಮೆ ತಳಿ ಕೆಳದಿ, ಕ್ಯಾಸನೂರು, ಉಮಟೆಗದ್ದೆ ಊರುಗಳಲ್ಲಿ ಈ ನಾಟಿ ತೋಟ ವಿಸ್ತಾರವಾಗಿದೆ. ಕರಾವಳಿ ಪ್ರದೇಶಗಳಲ್ಲಿ ಊರ ಅಡಿಕೆ, ಮಂಗಲ, ಇಂಟರ್ಸ್ಟ್ ಮಂಗಲ, ರತ್ನಗಿರಿ, ಮೋಹಿತ್ ನಗರ ಹೀಗೆ ಕೆಲವೊಂದು ತಳಿಗಳು ಹೆಚ್ಚು ಚಿರಪರಿಚಿತವಾಗಿದೆ.
ಇವುಗಳಲ್ಲಿ ರೋಗಗಳೇ ಬಾರದ ಕ್ಯಾಸನೂರು ನಾಟಿ ತಳಿಯು ಹೆಚ್ಚು ಫಸಲು ನೀಡುವ ಹಾಗೂ ಅತೀ ಕಡಿಮೆ ಅವಧಿ, ಅಡಿಕೆಯೂ ಭಾರವಿರುತ್ತದೆ ಎನ್ನುವ ಅಭಿಪ್ರಾಯ ಕೃಷಿಕರಲ್ಲಿದ್ದು, ಇದನ್ನು ನೆಡುವ ಕ್ರಮಗಳಲ್ಲಿ ಕೆಲವೊಂದು ಸೂಕ್ಷ್ಮತೆಯ ಅರಿವು ಬೇಕಾಗುತ್ತದೆ.ಮಣ್ಣು ಅಗತೆ ಮಾಡುವ ಕ್ರಮದಿಂದ ಹಿಡಿದು ಗುಂಡಿ, ಅದರ ಸುತ್ತಳತೆ,ಮಳೆ ನೀರು ಹಾದುಹೋಗಲು ವ್ಯವಸ್ಥೆ ಹೀಗೆ ಹತ್ತು ಹಲವು ಕ್ರಮಗಳನ್ನೂ ಮಾಡದಿದ್ದಾರು ಕಳೆ ನಿಯಂತ್ರಿಸಿ ಸಾಧಾರಣ ಕೃಷಿಯಲ್ಲೂ ಅಧಿಕ ಇಳುವರಿ ಗಳಿಸಿ ಮೆಚ್ಚಿಕೊಂಡಿದ್ದಾರೆ.
ಗುಡ್ಡಗಾಡು ಪ್ರದೇಶವನ್ನು ಅಗೆದು ಸಮತಟ್ಟು ಮಾಡಿ ಅಲ್ಲಿ ನೆಡುವ ಗಿಡಗಳಲ್ಲಿ ಕ್ಯಾಸನೂರು ನಾಟಿ ತಳಿ ಮೊದಲ ಸ್ಥಾನದಲ್ಲಿದ್ದು, ಉಳಿದಂತೆ ಪ್ರಸ್ತುತ ಇರುವ ತೋಟದಲ್ಲೇ ಎಡೆ ಎಡೆಯಲ್ಲಿ ಕ್ಯಾಸನೂರು ಪಕ್ಕದ ಉಮಟೆಗದ್ದೆ ಗಿಡಗಳನ್ನು ನೆಡಲಾಗುತ್ತಿದೆ. ಕೆಲವೆಡೆ ಕೆಳದಿಯ ಗಿಡವನ್ನು ನೆಡಲಾಗುತ್ತಿದೆ. ಯಾವ ಕಾರಣಕ್ಕೂ ಹೈಬ್ರಿಡ್, ರತ್ನ ಮಹಲ್, ತೀರ್ಥಹಳಿ, ಭೀಮಸಮುದ್ರ, ಇತ್ಯಾದಿ ಗಿಡಗಳನ್ನ ನೆಡಲೇ ಬೇಡಿ. ಬಿಸಿಲು-ನೆರಳು ಎರಡೂ ಸರಿಸಮಾನಾಗಿ ಗಿಡಗಳಿಗೆ ಅಗತ್ಯವಾಗಿದ್ದು, ಗಿಡಗಳ ಬೆಳವಣಿಗೆ ಹಾಗೂ ಅದರ ಆರೈಕೆಯಲ್ಲಿ ಹೆಚ್ಚಿನ ಉತ್ಸಾಹ ತೋರಿದಾಗ ಫಸಲು ಉತ್ತಮವಾಗಿ ಸಿಗುತ್ತದೆ ಎನ್ನುತ್ತಾರೆ ಸಂದರ್ಶಸಿದ ಕೃಷಿಕರು.

ಅಡಿಕೆ ಕೃಷಿ ಮಾರ್ಗದರ್ಶಕರು - ಮಂಜುನಾಥ್ ಹೆಗಡೆ.

Follow the ಅಡಿಕೆ ಬೆಳೆಗಾರರ ಚಾನೆಲ್ channel on WhatsApp: https://whatsapp.com/channel/0029Va6CXv17dmeYrgQil235