ಮಂಗಳವಾರ, ಜೂನ್ 14, 2022

ಅಡಿಕೆ ಸಸಿ ನೆಡುವಾಗ ಬಾಳೆ ನೆಟ್ಟರೆ ಏನು ಪರಿಣಾಮ?

ಅಡಿಕೆ ತೋಟದಲ್ಲಿ ಅನುತ್ಪಾದಕ ಮರಗಳ ಪ್ರಮಾಣ ಹೆಚ್ಚಳವಾಗಲು ಮುಖ್ಯ ಕಾರಣ ಸ್ಪರ್ಧೆ ಕೊಡುವ ಮಿಶ್ರ ಬೆಳೆ. ಅಡಿಕೆ ಸಸಿಗಳಲ್ಲಿ ಅಸಮತೋಲನ ಬೆಳವಣಿಗೆ, ಸಣಕಲು ಸಸ್ಯ , ಎಲೆಗಳು ಕಡಿಮೆ ಯಾಗುವುದು ಸರಿಯಾಗಿ ಬೆಳವಣಿಗೆ ಹೊಂದರೆ ಇರುವುದು,ಬಿಸಿಲಿನ ತಾಪಕ್ಕೆ ಹೊಂದಿಕೊಳ್ಳುವ ಶಕ್ತಿ ಕಡಿಮೆಯಾಗುವುದು ಎಲ್ಲದಕ್ಕೂ ಕಾರಣ ಸೂಕ್ತವಲ್ಲದ ಮಿಶ್ರ ಬೆಳೆ. ಮೊದಲ ಒಂದೆರಡು ವರ್ಷ ಮಿಶ್ರ ಬೆಳೆಯಾಗಿ ಬಾಳೆ ಬೆಳೆಯುವುದು.

ಸಾಮಾನ್ಯವಾಗಿ ಹೆಚ್ಚಿನವರು ಅಡಿಕೆ ಸಸಿ ನೆಡುವಾಗ ಬಾಳೆ ನಾಟಿ ಮಾಡಲು ಬಯಸುತ್ತಾರೆ.

ಬಾಳೆ ಬೆಳೆದರೆ ಅಡಿಕೆ ತೋಟದ ಸ್ವಲ್ಪ ಖರ್ಚು ಹುಟ್ಟುತ್ತದೆ ಎಂಬುದು ಸರಿಯಾದರೂ ಅಡಿಕೆ ತೋಟವೇ ಮುಂದೆ ಹಾಳಾಗುತ್ತದೆ..

ಅಡಿಕೆ ಸಸಿ ನಾಟಿ ಮಾಡುವ ಸಮಯದಲ್ಲಿ ಬಾಳೆ ಬೆಳೆಸಿದರೆ ಅಡಿಕೆ ತೋಟದಲ್ಲಿ ಅನುತ್ಪಾದಕ ಮರಗಳ ಸಂಖ್ಯೆ ಹೆಚ್ಚುತ್ತದೆ.ಅಂತಹ ಅಡಿಕೆ ತೋಟದಲ್ಲಿ ಉತ್ತಮ ಫಸಲು ಬರುವುದಿಲ್ಲ.

ಇದನ್ನೂ ಓದಿ: ಕೆಳದಿಯ ಅರಸರ ಕಾಲದ ಅಡಿಕೆ ತಳಿ

ಮೊದಲ ಎರಡು ಮೂರು ವರ್ಷ ಬಾಳೆಗಿಂತ ಎರಡು ಪಾಲು ಹೆಚ್ಚು ಆದಾಯ ಕೊಡಬಲ್ಲ ಮಿಶ್ರ ಬೆಳೆಗಳು ಇವೆ.

ಅನನಾಸು, ಶುಂಠಿ, ಅರಶಿನ ಹಾಗೆಯೇ ಸಾಧ್ಯವಿದರೆ ಸ್ಪರ್ಧೆ ಮಾಡದಂತಹ ತರಕಾರಿ ಬೆಳೆಗಳನ್ನು ಬೆಳೆಯಬಹುದು.

ಅಡಿಕೆ ತೋಟದಲ್ಲಿ ಬಾಳೆ ಬೆಳೆದರೆ 2 ವರ್ಷವಾದರೂ ಬೆಳವಣಿಗೆ ಇಷ್ಟೇ.

ಅಡಿಕೆ – ಬಾಳೆ ಹೊಂದಿಕೆ ಇಲ್ಲ:

ಅಡಿಕೆ ಮತ್ತು ಬಾಳೆ ಎಲ್ಲಾ ಸಮಯದಲ್ಲೂ ಹೊಂದಾಣಿಕೆಯಾಗುವ ಬೆಳೆಗಳಲ್ಲ.

ಅಡಿಕೆ ಸಸಿಯ ಎಳೆ ಪ್ರಾಯದಲ್ಲಿ ಬಾಳೆಯನ್ನು ಬೆಳೆಸಿದರೆ ಎಳೆ ಪ್ರಾಯದ ಅಡಿಕೆ ಸಸಿಗಳ ಕೆಲವು ಅಗತ್ಯ ಬೆಳೆವಣಿಗೆಗೆ ತೊಂದರೆ ಉಂಟಾಗುತ್ತದೆ.

ಅಡಿಕೆ, ತೆಂಗು ಮುಂತಾದ ಧೀರ್ಘಾವಧಿಯ ಬೆಳೆಗಳಲ್ಲಿ ರೈತರು ಅನುಸರಿಸಬೇಕಾದ ಮಹತ್ವದ ಬೇಸಾಯ ಕ್ರಮ, ಎಳೆ ಪ್ರಾಯದ ಸೂಕ್ತ ನಿರ್ವಹಣೆ.

ಇದನ್ನೂ ಓದಿ: ಅಡಿಕೆ ಸಸಿಗಳಿಗೆ KGF to ಕ್ಯಾಸನೂರಿಗೆ ಯಶ್ ಪಯಣ

ಒಂದು ಅಡಿಕೆ ಸಸಿ ಒಂದು ವರ್ಷಕ್ಕೆ ಇಷ್ಟೇ ಬೆಳವಣಿಗೆ ಹೊಂದಬೇಕು, ಎರಡು ವರ್ಷಕ್ಕೆ ಇಷ್ಟು ಬೆಳವಣಿಗೆ ಹೊಂದ ಬೇಕು. ಮೂರನೇ ವರ್ಷಕ್ಕೆ ಹೂ ಗೊಂಚಲು ಬಿಡಬೇಕು ಎಂಬುದು ಅದರ ಬೆಳೆ ಶಾಸ್ತ್ರ.

ಪ್ರಾರಂಭದ ಎರಡು – ಮೂರು ವರ್ಷದ ಆರೈಕೆ ಮತ್ತು ಆ ಸಮಯದಲ್ಲಿ ಸಸಿಯ ಅಂತರ್ಗತ ಶಕ್ತಿ, ಅದರ ಜೀವಮಾನದ ಉತ್ಪಾದಕತೆಯನ್ನು ನಿರ್ಧರಿಸುತ್ತದೆ.

ಎಳೆ, ಪ್ರಾಯದಲ್ಲಿ ಅದನ್ನು ನಾವು ಹೆಚ್ಚು ನಿಗಾ ಕೊಟ್ಟು ಸಾಕಬೇಕು. ನಂತರ ಅದು ನಮ್ಮನ್ನು ಸಾಕುತ್ತದೆ.

ಬಾಳೆ ನೆಟ್ಟರೆ ಅಡಿಕೆ ಸಸ್ಯಕ್ಕೆ ಬೆಳವಣಿಗೆಗೆ ಬೇಕಾಗುವ ಬೆಳಕಿನ ಕೊರತೆ ಆಗುತ್ತದೆ. ಬೆಳಕು ಕಡಿಮೆ ಆದರೆ ಅಡಿಕೆ ಗಿಡದ ಬೆಳವಣಿಗೆಯನ್ನು ಹತ್ತಿಕ್ಕಲ್ಪಡುತ್ತದೆ.

ಬಹಳಷ್ಟು ಜನರ ಅಡಿಕೆ ತೋಟಗಳಲ್ಲಿ ಸಪುರ, ಅನುತ್ಪಾದಕ ಮರಗಳು ಹೆಚ್ಚಾಗಿದ್ದರೆ ಅಲ್ಲಿ ಬಾಳೆ ನೆಡಲಾಗಿದೆ ಎಂದು ತಿಳಿಯಬಹುದು.

ಬಾಳೆ ಬೆಳೆಸಿದರೆ ಏನಾಗುತ್ತದೆ:

ಬಾಳೆಗೆ ತಾಯಿ ಬೇರು ಇಲ್ಲ. ಅಡಿಕೆಗೂ ತಾಯಿ ಬೇರು ಇಲ್ಲ. ಬಾಳೆಯ ಬೇರು ನೆಲದ ಪೂರ್ತಿ ಕೇವಲ 3-4 ತಿಂಗಳಲ್ಲಿ ಆವರಿಸುತ್ತದೆ. ಅಡಿಕೆ ಅದರ 5% ವೂ ಇಲ್ಲ.

ಬಾಳೆ ಬೆಳೆ ಕೆಲವೇ ಸಮಯದಲ್ಲಿ ಬಾರೀ ಬೆಳವಣಿಗೆಯಾಗುವ ಸಸ್ಯ. ಸುಮಾರು 6-7 ತಿಂಗಳಿಗೆ ಕನಿಷ್ಟ 6 ಅಡಿ ಸುತ್ತಳತೆಯನ್ನು ವ್ಯಾಪಿಸುತ್ತದೆ.

ಅಷ್ಟು ಬೆಳೆಯಬೇಕಿದ್ದರೆ ಅದು ಅಷ್ಟೇ ವೇಗವಾಗಿ ಲಭ್ಯವಿರುವ ಎಲ್ಲಾ ಪೋಷಕಾಂಶಗಳನ್ನೂ ಹೀರಿಕೊಳ್ಳುತ್ತದೆ.

ಬಾಳೆಯ ಬೇರಿನ ಬೆಳೆವಣಿಗೆ ದಿನಕ್ಕೆ 1-2 ಇಂಚಿನಷ್ಟು. ಅಡಿಕೆ ಸಸ್ಯದ ಬೇರಿನ ಬೆಳೆವಣಿಗೆ ದಿನಕ್ಕೆ ಹೆಚ್ಚೆಂದರೆ 1-2 ಮಿಲಿ ಮೀಟರುಗಳಷ್ಟು.

ಇದನ್ನೂ ಓದಿ:ಅಡಿಕೆ ಸಸಿಗಳ ಆಯ್ಕೆ ಬಗ್ಗೆ ತಿಳಿಯಲು

ಅಡಿಕೆ ಸಸ್ಯಕ್ಕೆ ನಾವು ಕೊಡುವ ಎಲ್ಲಾ ಪೋಷಕಾಂಶಗಳನ್ನೂ ಬಾಳೆ ಸಸ್ಯವು ತನ್ನ ಆಹಾರ ದಾಹೀ ಬೇರುಗಳ ಮೂಲಕ ಮೊದಲು ಬಳಸಿಕೊಳ್ಳುತ್ತವೆ.

ಅಡಿಕೆ ಸಸಿಗಳಿಗೆ ಬೇಕಾದಾಗ ಪೋಷಕಗಳ ಲಭ್ಯತೆ ಇಲ್ಲದಾಗುತ್ತದೆ.

ಯಾವುದೇ ಸಸ್ಯವು ಉತ್ತಮವಾಗಿ ಬೆಳೆಯಲು ಅಗತ್ಯ ಪ್ರಮಾಣದಲ್ಲಿ ಬೆಳೆಕು ಬೇಕು. ಬಾಳೆಯನ್ನು ಬೆಳೆಸಿದಾಗ ಅವಶ್ಯಕತೆಗಿಂತ ಕಡಿಮೆ ಬಿಸಿಲು ಲಭಿಸಿ ಸರಿಯಾಗಿ ದ್ಯುತಿಸಂಸ್ಲೇಷಣ ಕ್ರಿಯೆ ನಡೆಯದೆ ಸಸ್ಯ ಬಡವಾಗುತ್ತದೆ.

ಬಾಳೆ ಬೆಳೆಗೆ ಅಧಿಕ ಪ್ರಮಾಣದಲ್ಲಿ ಜಂತು ಹುಳ( ನಮಟೋಡು) ಬಾಧೆ ಇರುತ್ತದೆ. ಇದು ಬಾಳೆಯಲ್ಲದೆ ಅಡಿಕೆ ಸಸ್ಯಕ್ಕೂ ವ್ಯಾಪಿಸುವ ಸಾಧ್ಯತೆ ಇದ್ದು, ಇದು ಅಡಿಕೆ ಸಸ್ಯದ ಬೇರಿನ ಬೆಳೆವಣಿಗೆಯನ್ನು ಹತ್ತಿಕ್ಕುತ್ತದೆ.

ಇನ್ನೂ ಬಾಳೆಯ ಕಾರಣದಿಂದ ( ಕಂದು, ಮಗುಚಿ ಬೀಳುವುದು ಇತ್ಯಾದಿ) ಉಂಟಾಗುವ ನಷ್ಟ ಬೇರೆ ಇದೆ.

ಮಳೆಗಾಲದಲ್ಲಿ ನೀರು ಹೆಚ್ಚಾಗಿ ಅಡಿಕೆ ಸಸಿಗಳ ಕೊಳೆಯುವಿಕೆಗೂ ಕಾರಣವಾಗುತ್ತದೆ.

ಅಡಿಕೆ ಸಸಿಯೊಂದಿಗೆ ಸೂಕ್ತ ಮಿಶ್ರ ಬೆಳೆ:

ಅಡಿಕೆ ಸಸಿ ನೆಟ್ಟು ಮೊದಲನೇ ವರ್ಷ ಬೆಳೆಸಬಹುದಾದ ಮಿಶ್ರ ಬೆಳೆಗಳಲ್ಲಿ ಅರಶಿನ – ಶುಂಠಿ ಅಥವಾ ಅನನಾಸು.

ಈ ಮೂರೂ ಬೆಳೆಗಳನ್ನೂ ಸಸಿ ಬೆಳೆಸಿದ ನಂತರ ಯಾವುದೇ ವರ್ಷದಲ್ಲೂ ಮಿಶ್ರ ಬೆಳೆಯಾಗಿ ಬೆಳೆಸಬಹುದು.

ಬಾಳೆಯನ್ನು ಅಡಿಕೆ ಸಸಿಗೆ ಸುಮಾರು 5 ವರ್ಷ ಕಳೆದ ನಂತರ ನಾಟಿ ಮಾಡಬೇಕು. ಈ ಸಮಯದಲ್ಲಿ ಬಾಳೆಗೆ ನೆರಳು – ಬೆಳೆಕು ಸಮನಾಗಿ ಹಂಚಿಕೆಯಾಗಿ ದೊರೆತು ಬಾಳೆಯ ಗೊನೆ ಉತ್ತಮ ಗಾತ್ರದಲ್ಲಿ ದೊರೆಯುತ್ತದೆ.

ಈ ಸಮಯದಲ್ಲಿ ಅಡಿಕೆ ಸಸಿ ಬಾಳೆಗಿಂತ ಎತ್ತರಕ್ಕೆ ಬೆಳೆದು ಬೆಳಕಿನ ಕೊರತೆ ಅನುಭವಿಸುವುದಿಲ್ಲ.

ನಾವು ತಿಳಿದಂತೆ ಬಾಳೆಗೆ ಸ್ವಲ್ಪ ಮಟ್ಟಿನ ನೆರಳು ಉತ್ತಮ ಇಳುವರಿಗೆ ಸಹಾಯಕವಾಗುತ್ತದೆ. ಅಡಿಕೆ ತೋಟಕ್ಕೂ ಫಲ ಕೊಡುವ ಸಮಯದಲ್ಲಿ ಇದು ಸೂಕ್ತಸೂಕ್ಷ್ಮ ವಾತಾವರಣವನ್ನು ಕೊಡುತ್ತದೆ.

ಗೊನೆ ಹಾಕಿದಾಗ ಬಾಳೆ ಯನ್ನು ಆಧರಿಸಲು ಅಡಿಕೆ ಮರಗಳು ನೆರವಾಗುತ್ತವೆ.

ಕೆಲವರು ಅಡಿಕೆ ಸಸಿಯ ಜೊತೆಗೆ ಬಾಳೆ ನಾಟಿ ಮಾಡಿದರೆ ಅಡಿಕೆಗೆ ನೆರಳು ಮಾಡಬೇಕಾದ ಅವಶ್ಯಕತೆ ಇರುವುದಿಲ್ಲ ಎಂದು ವಾದಿಸುತ್ತಾರೆ. ಅಡಿಕೆ ಸಸಿಗೆ ಅಂತಹ ನೆರಳು ಬೇಕಾಗಿಲ್ಲ. ಮಣ್ಣಿನ ಫಲವತ್ತತೆ ನಷ್ಟವಾಗದಂತೆ ಅಡಿಕೆ ಜೊತೆಗೆ ತೊಗರಿ ಸಸ್ಯವನ್ನು ನಾಟಿ ಮಾಡಿದರೆ ಸಾಕಾಗುತ್ತದೆ.ಅಡಿಕೆ ಸಸಿಗೆ ಮಕರ ಸಂಕ್ರಮಣದ ತನಕ ನೆರಳು ಹೆಚ್ಚು ಬೇಕಾಗುತ್ತದೆ. ನಂತರ ವಾತಾವರಣದಲ್ಲಿ ಅರ್ಧ್ರತೆ ಹೆಚ್ಚು ಇರುವ ಕಾರಣ ಅಂತಹ ತೊಂದರೆ ಇರುವುದಿಲ್ಲ.

ಸರಿಯಾದ ಪೋಷಕಾಂಶ ನಿರ್ವಹಣೆ ಮತ್ತು ಬೇಸಾಯ ಕ್ರಮದಲ್ಲಿ ನೆರಳು ರಹಿತವಾಗಿ ಚೆನ್ನಾಗಿ ಸಸಿ ಬೆಳೆಸಬಹುದು.

ಯಾರು ಮೊದಲ ಎರಡು – ಮೂರು ವರ್ಷ ಕಾಲ ಬಾಳೆಯನ್ನು ಮಿಶ್ರ ಬೆಳೆಯಾಗಿ ಬೆಳೆಸಲಿಲ್ಲವೋ ಅಲ್ಲೆಲ್ಲಾ ಅಡಿಕೆ ತೋಟ ದಲ್ಲಿ ಅನುತ್ಪಾದಕ ಮರಗಳು ತುಂಬಾ ಕಡಿಮೆ.

ಇದನ್ನೂ ಓದಿ: ಅಡಿಕೆ ತೋಟ ಮಾಡಬೇಕೇ? ಅದಕ್ಕೂ ಮೊದಲು ಇದೆಲ್ಲ ತಿಳಿದಿರಲಿ

ಅಡಿಕೆ – ತೆಂಗಿನ ಮರಕ್ಕೆ ಎಳೆಯ ಪ್ರಾಯದಲ್ಲಿ ಬುಡ ಭಾಗದಲ್ಲಿ ಬೊಡ್ಡೆ (Bole) ಬೆಳೆದರೆ ಅದರ ಶಕ್ತಿಯೇ ಬೇರೆ ಇರುತ್ತದೆ. ಅಧಿಕ ನೆರಳು, ಆಹಾರದ ಕೊರೆತೆ ಇದರಿಂದ ಬಹುತೇಕ ಅಡಿಕೆ ಸಸ್ಯಗಳು ಬೊಡ್ಡೆ ಬಿಡುವುದೇ ಇಲ್ಲ.

ಅಡಿಕೆ ಬೆಳೆಸುವ ರೈತರು ಸೂಕ್ತ ಮಿಶ ಬೆಳೆಯನ್ನು ಆರಿಸಿಕೊಂಡರೆ ಮೂರೇ ವರ್ಷದಲ್ಲಿ ಜಾಗದ ಮತ್ತು ಅಡಿಕೆ ತೋಟದ ಖರ್ಚನ್ನು ಅದರಲ್ಲಿ ಗಳಿಸಬಹುದು. ಸಸಿಯಾಗಿ ತಿಳಿದುಕೊಳ್ಳದೆ ಯಾರೋ ಹೇಳಿದರು ಎಂದು ಬಾಳೆ ಬೆಳೆದರೆ ಅಡಿಕೆ ತೋಟದ ಭವಿಷ್ಯ ಹಾಳಾಗುತ್ತದೆ.


Follow the ಅಡಿಕೆ ಬೆಳೆಗಾರರ ಚಾನೆಲ್ channel on WhatsApp: https://whatsapp.com/channel/0029Va6CXv17dmeYrgQil235

ಸೋಮವಾರ, ಜೂನ್ 6, 2022

ಅಡಿಕೆ ಕೊಳೆ ನಿಯಂತ್ರಣ ಮಾಡುದು ಹೇಗೆ....

ಮಳೆಗಾಲ  ಇನ್ನೇನು ಪ್ರಾರಂಭವಾಗಲಿದೆ. ಅಡಿಕೆಗೆ ಕೊಳೆಗಾಲ. ಅಂದರೆ  ಮಳೆ  ಬಿದ್ದ 15 ದಿನ  ನಂತರ  ಕೊಳೆ ಫಂಗಸ್  ಎಳೆಗಾಯಿಗಳ  ತೊಟ್ಟುಗಳನ್ನು ಪ್ರವೇಸಿಸಿ ಅಭಿರುದ್ಧಿ ಹೊಂದುವುದು.  ಇದರಿಂದ   ತೊಟ್ಟುಗಳು ಕೊಳೆತು  ಎಳೆಗಾಯಿ ಉದುರುವುವು (ಜೂನ್ -ಜುಲೈ ). ಆಗಸ್ಟ್ ತಿಂಗಳಲ್ಲಿ  ಮಳೆ  ಹೆಚ್ಚಾಗಿ ಅರೆ ಬಲಿತ  ಅಡಿಕೆ ಸಿಪ್ಪೆ ಮೇಲೆ ಬೂದು ಬಣ್ಣದ  ಫಂಗಸ್  ಬೆಳೆದು  ಕೊಳೆಯುವದರಿಂದ  ನೀರ್ಗೋಳೆ ಉಂಟಾಗುವುದು.  ಸೆಪ್ಟೆಂಬರ್ - ಅಕ್ಟೋಬರ್ ತಿಂಗಳಲ್ಲಿ  ಬಲಿತ  ಕಾಯಿಗಳಿಗೆ  ಬೂದು  ಗೊಳೆ ಬರುವುದು.
ನಿರ್ವಹಣೆ
1) ಮಣ್ಣಿಗೆ 1 ಎಕರೆಗೆ  2 ಕ್ವಿoಟಾಲ್  ಕೃಷಿ  ಸುಣ್ಣ ಕೊಡಿ
2) ಕಳೆದ  ವರ್ಷ ಕೊಳೆ ಪೀಡಿತ  ಸತ್ತ  ಹಿಂಗಾರಗಳನ್ನು  ತೆಗೆಯಿರಿ
3) ಬಸಿಗಲುವೇಗಳನ್ನು  ಸ್ವಚ್ಛಗೊಳಿಸಿ, ಕೊಳೆಪೀಡಿತ ಉದುರಿದ ಕಾಯಿಗಳನ್ನು  ತೆಗೆಯಿರಿ
4) ಅಂತರ ಬೆಳೆಗಳ  ಮತ್ತು ಕಾಡುಮರಗಳ  ಹೆಚ್ಚುವರಿ ರೆಂಬೆ ಕೊಂಬೆಗಳನ್ನು  ಕತ್ತರಿಸಿ  ತೆಗೆಯಿರಿ
5) ತಟಸ್ತ ಗೊಳಿಸಿದ ( ರಸಸಾರ  6.5 ರಿಂದ 7.5 ) ಶೇಕಡಾ  1 ರ  ಬೋರ್ಡೊ ದ್ರಾವಣ  ಸಿಂಪರಿಸಿ. ಇದಕ್ಕೆ ಬದಲಾಗಿ   ಶೇ. O.25 ರ ( 200 ಲೀಟರ್ ನೀರಿಗೆ 500 ಗ್ರಾಂ ) ತಾಮ್ರದ ಆಕ್ಸಿಕ್ಲೋರೈಡ್ ಅಥವಾ ಶೇo.2ರ ( 200 ಲೀಟರ್ ನೀರಿಗೆ  400ಗ್ರಾಂ ) ಮೆಟಲಕ್ಸಿಲ್ ಎಂ ಜಡ್ಸಿಂಪರಿಸಿ.) ಮಳೆ  ಹೆಚ್ಚು  ಬೀಳುವ  ಪ್ರದೇಶಗಳಲ್ಲಿ  ಬೋರ್ಡೋ ಸಿಂಪರಣೆ  ನಂತರ ಪ್ಲಾಸ್ಟಿಕ್ ಕೊಟ್ಟೆ ಕಟ್ಟಬಹುದು.

Follow the ಅಡಿಕೆ ಬೆಳೆಗಾರರ ಚಾನೆಲ್ channel on WhatsApp: https://whatsapp.com/channel/0029Va6CXv17dmeYrgQil235

ಗುರುವಾರ, ಜೂನ್ 2, 2022

KGF ನಟ ಯಶ್ ಕ್ಯಾಸನೂರು ತಳಿ ಅಡಿಕೆ ತೋಟದ ಸಿದ್ದತೆ

ನಟ ರಾಕಿಂಗ್ ಸ್ಟಾರ್ ಯಶ್ ಇದೀಗ ಕೆಜಿಎಫ್ ಸಿನಿಮಾ ಮೂಲಕ ವಿಶ್ವ ಮಟ್ಟದಲ್ಲಿ ಸದ್ದು ಮಾಡುತ್ತಿದ್ದಾರೆ. ಹೌದು ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಭಾಗ-2 ಕಲೆಕ್ಷನ್ ವಿಚಾರದಲ್ಲಿ ದಾಖಲೆ ಮಾಡಿರುವುದು ಎಲ್ಲರಿಗೂ ಗೊತ್ತು. ಇದು ಎಲ್ಲಾ ಕನ್ನಡಿಗರಿಗೂ ಹೆಮ್ಮೆಯ ವಿಷಯ. ನಿರ್ದೇಶಕ ಪ್ರಶಾಂತ್ ನೀಲ್ ಅವರು ಕನ್ನಡದ ಶಕ್ತಿಯನ್ನು ಇಡಿ ದೇಶಕ್ಕೆ ಮತ್ತು, ಹೊರದೇಶಕ್ಕೂ ಕೂಡ ಈ ಕೆಜಿಎಫ್ ಸಿನಿಮಾ ಮೂಲಕ ತೋರಿಸಿದ್ದಾರೆ. ನಟ ರಾಕಿಂಗ್ ಸ್ಟಾರ್ ಯಶ್ ಹೆಚ್ಚು ಕುಟುಂಬದ ಜೊತೆ ಈಗ ಕಾಣಿಸಿಕೊಳ್ಳುತ್ತಿದ್ದು ಸೋಷಿಯಲ್ ಮೀಡಿಯಾದಲ್ಲಿ ಯಶ್ ಅವರ ಕುರಿತಾಗಿ ಇನ್ನೊಂದು ವಿಚಾರ ಹೊರಗಡೆ ಬೀಳುತ್ತಿದೆ.

ಯಶ್ ಅವರ ಮುಂದಿನ ಸಿನಿಮಾ ಯಾವುದು.? ಯಾರು ನಿರ್ದೇಶಕರು ಎನ್ನುವ ವಿಚಾರ ಇಷ್ಟರಲ್ಲೆ ತಿಳಿಯುತ್ತಿದ್ದು, ಯಶ್ ಅವರ 19ನೇ ಚಿತ್ರ ಸೆಟ್ಟೇರಲಿದೆಯಂತೆ. ಮುಹೂರ್ತ ಕೂಡ ಫಿಕ್ಸ್ ಆಗುತ್ತಿದೆ ಎಂದು ಕೇಳಿಬರುತ್ತಿದೆ. ಕೆಜಿಎಫ್ ಸಿನಿಮಾ 50 ದಿನ ಪೂರೈಸಿದ ದಿನವೇ ಈ ಮಾಹಿತಿ ಹೊರ ಬೀಳುತ್ತಿದೆ ಎಂದು ಕೇಳಿ ಬಂದಿದೆ. ಹೌದು ಯಶ್ ಅವರು ಅವರ ತಂದೆ ತಾಯಿಗೆ ಈಗಾಗಲೇ ಸಾಕಷ್ಟು ಮಾಡಿದ್ದಾರೆ. ಒಂದು ಫಾರ್ಮ್ ಹೌಸ್ ಕೊಂಡುಕೊಂಡ ಯಶ್, ತೋಟಕ್ಕೆ ಬೇಕಾಗಿರುವ ಎಲ್ಲಾ ವಸ್ತುಗಳನ್ನು ಕೂಡ ನೀಡಿದ್ದಾರೆ. ತಂದೆ ತಾಯಿಗೆ ಹಾಗೂ ತಂಗಿಗೂ ಸಹ ದುಬಾರಿ ಗಿಫ್ಟ್ ನೀಡಿದ್ದಾರೆ. ಹಾಗೆ ತಂದೆ-ತಾಯಿಗೆ ಓಡಾಡಲು ಟಾಟಾ ವೆಲ್ಫೇರ್ ದುಬಾರಿ ಕಾರನ್ನು ಕೂಡ ಕೊಟ್ಟಿದ್ದಾರೆ ಎನ್ನಲಾಗುತ್ತಿದೆ.
ನಟನೆ ಜೊತೆಗೆ ರಾಕಿಂಗ್ ಸ್ಟಾರ್ ಯಶ್ ಸಾಹೇಬ್ರು ದರ್ಶನ ಸಾಹೇಬ್ರ ಹಾಗೆ ತೋಟ ಮಾಡೋಕೆ ಮುಂದಾಗಿದ್ದು ಈಗ ಸುದ್ದಿಯಾಗಿದೆ. ಯಶ್ ಅವರು ಈಗಾಗಲೇ ತೇಜ್ ನರ್ಸರಿಯ ಶಿವನಪುರ ರಮೇಶ ಅವರನ್ನ ಬೇಟಿಯಾಗಿ ಅಡಕೆ ತೋಟ ಮಾಡುವ ಬಗ್ಗೆ ಚರ್ಚೆ ನಡೆಸಿದ್ದಾರೆ. ಬಹಳ ಕಡೆ ಕೇಳಿಪಟ್ಟ ಕ್ಯಾಸನೂರು ಅಡಿಕೆ ತಳಿ ಬೆಳೆಯಲು ಉತ್ಸುಕರಾಗಿದ್ದ ಯಶ್ ಅವರು ಚಾಲೆಂಜಿಂಗ್ ಸ್ಟಾರ್ ದರ್ಶನ ಅಭಿಪ್ರಾಯ ಪಡೆದ್ದಿದ್ದಾರೆ. ದರ್ಶನ ಅವರು ಕೂಡ ಕ್ಯಾಸನೂರಿನ ಮಹಾಬಲೇಶ್ವರ ಅವರ ಬಳಿ ಅಡಿಕೆ ಸಸಿ ಪಡೆದು ಹಾಕಿರುವ ತೋಟ ತೋರಿಸಿ ಇದೇ ತಳಿ ಹಾಕುವಂತೆ ಸಲಹೆ ನೀಡಿದದ್ದಾರೆಂದು ಶಿವಪುರ ರಮೇಶ್ ಮಾಧ್ಯಮಗಳ ಮುಂದೆ ಯಶ್ ಫ್ಲಾನ್ ಹೊರಹಾಕಿದ್ದಾರೆ. ಯಾವಾಗಲೂ ಅಡಿಕೆಗೆ ಅಧಿಕ ಬೆಲೆ ಇರುವುದರಿಂದ ಅಧಿಕ ಇಳುವರಿ ಕೊಡುವ ಸದೃಢ ಮರವಾಗುವ ಯಾವುದೇ ರೋಗರುಜನೆಗಳಿಗೆ ತುತ್ತಾಗದ ಕ್ಯಾಸನೂರು ಸ್ಥಳೀಯ ಅಡಿಕೆಯ ಸಸಿಗಳಿಗಾಗಿ ಕ್ಯಾಸನೂರು ಮಹಾಬಲೇಶ್ವರ ಅವರನ್ನ ಸಂಪರ್ಕಿಸಿದ್ದಾರೆಂದು ತಿಳಿದು ಬಂದಿದೆ. ಮೂಲಗಳ ಪ್ರಕಾರ ಮಹಾಬಲೇಶ್ವರ ಪತ್ರಕರ್ತರಾಗಿ ಕನ್ನಡದ ಅನೇಕೆ ಚಾನೆಲ್‌ಗಳಲ್ಲಿ ಕೆಲಸ ಮಾಡಿ ಅಜ್ಜ ಮಾಡಿದ್ದ ತೋಟ ಮನೆ ನೋಡಿಕೊಂಡು ಕೃಷಿ ಬದುಕು ನಡೆಸುತ್ತಿದ್ದಾರೆ. ಇವರಲ್ಲಿ ಸಹಜವಾಗಿ ಆರ್ಗಾನಿಕ್ ಆಗಿ ಬೆಳೆದ ಆಯ್ದ ಬೀಜಗಳಿದ್ದ ಮಾಡಿದ ಉತ್ತಮ ಅಡಿಕೆ ಸಸಿಗಳನ್ನ ಮಾಡಿ ತಮ್ಮ ಸ್ನೇಹಿತರಿಗೆ ಮಾತ್ರ ಮಾರುತ್ತಾರೆಂದು ಶಿವನಪುರ ರಮೇಶ್ ಹೇಳಿದರು. ಈಗಾಗಲೆ ಶಿವನಪುರ ರಮೇಶ್ ಅನೇಕ ಸೆಲೆಬ್ರಿಟಿಗಳಿಗೆ ಇವರ ಬಳಿ ಅಡಿಕೆಸಸಿಗೆ ಸಂಪರ್ಕಿಸುತ್ತಾರೆ.
ಯಶ್ ಕೂಡ ಕೃಷಿ ಒಲವು ಹೊಂದಿದ್ದು ದರ್ಶನ್ ತರ ಒಂದೊಳ್ಳೆ ಫಾರ್ಮ್ ಅದರ ಜೊತೆಗೆ ಅಡಿಕೆ ತೋಟ ಮಾಡುವ ಇಚ್ಚೆ ನೋಡಿದರೇ ಎಂಥವರಿಗೂ ಹೆಮ್ಮೆ ಎನ್ನಿಸುತ್ತಿದೆ.

Follow the ಅಡಿಕೆ ಬೆಳೆಗಾರರ ಚಾನೆಲ್ channel on WhatsApp: https://whatsapp.com/channel/0029Va6CXv17dmeYrgQil235