ಗುರುವಾರ, ಅಕ್ಟೋಬರ್ 26, 2023

ಅಡಿಕೆ ಬೆಳೆಗಾರರಿಗಷ್ಟೇ ಅಲ್ಲ, 'ಕೇಣಿ' ಮಾಡೋ ಕೇಣಿದಾರರಿಗೂ ಎದುರಾಯ್ತು ಭಾರೀ ದೊಡ್ಡ ಸಂಕಷ್ಟ !!

ಡಿಕೆ ಬೆಳೆಗಾರರಿಗಷ್ಟೇ(Arecanut Growers)ಅಲ್ಲದೇ, ಕೇಣಿ’ ಮಾಡುವ ಕೇಣಿದಾರರಿಗೂ ಭಾರೀ ದೊಡ್ಡ ಸಂಕಷ್ಟ(Arecanut growers problem) ಎದುರಾಗಿದೆ. ಬಸವಾಪಟ್ಟಣದಲ್ಲಿ ಅನಾವೃಷ್ಟಿಯಿಂದ ಈ ಭಾರೀ ನಷ್ಟ ಉಂಟಾಗಿದ್ದು, ಈ ವರ್ಷ ಮಳೆಯ ಅಭಾವದ ಪರಿಣಾಮ ಅಡಿಕೆ ಫಸಲಿನ ಇಳುವರಿ ಶೇಕಡ 40ರಷ್ಟು ಕುಸಿತ ಕಂಡಿದೆ.

ಪ್ರತಿ ವರ್ಷ ಎಕರೆಗೆ ಸರಾಸರಿ 10 ಕ್ವಿಂಟಾಲಲ್‌ನಷ್ಟು ಅಡಿಕೆ ದೊರೆಯುತ್ತಿತ್ತು. ಈ ವರ್ಷ ಕೇವಲ 5 ಕ್ವಿಂಟಲ್‌ಗೆ ಇಳಿಕೆ ಕಂಡಿದ್ದು, ಅಡಿಕೆಯ ತೂಕ ಕೂಡ ಕಡಿಮೆಯಾಗಿದೆ. ಒಂದು ಚೀಲ ಅಡಿಕೆ 80ರಿಂದ 85 ಕೆ.ಜಿ. ತೂಗುತ್ತಿದ್ದಲ್ಲಿ ಈಗ 60ರಿಂದ 65 ಕೆ.ಜಿ.ಯಷ್ಟಾಗಿದೆ. ಬಸವಾಪಟ್ಟಣ ಸುತ್ತಲಿನ ಗ್ರಾಮಗಳ ನೂರಾರು ಎಕರೆ ಅಡಿಕೆ ತೋಟಗಳನ್ನು ಕೇಣಿ ಪಡೆದು, ಮರಗಳಿಂದ ಅಡಿಕೆ ಕೊಯ್ದು ಕಣಗಳಿಗೆ ಸಾಗಿಸಿ ಸುಲಿಯುವುದು, ಬೇಯಿಸುವುದು, ಒಣಗಿಸುವ ಕೆಲಸವನ್ನು ಕೇಣಿದಾರರು ಮಾಡಿಸುತ್ತಾರೆ. ಆದರೆ, ಒಣಗಿಸಿದ ಕೂಡಲೇ ಮಾರಾಟ ಮಾಡಲಾಗದು. ದರ ಹೆಚ್ಚಾಗುವವರೆಗೆ ಕಾಯಬೇಕಾಗುತ್ತದೆ. ಇದರಿಂದ ಕೆಲವು ದಿನ ಅಡಿಕೆ ಇಟ್ಟರು ಕೂಡ ತೂಕ ಕಡಿಮೆಯಾಗುತ್ತದೆ.

‘ಪ್ರತಿ ವರ್ಷ ಜೂನ್ ತಿಂಗಳಲ್ಲಿ ಕೇಣಿದಾರರು, ರೈತರ ತೋಟಗಳನ್ನು ಕೇಣಿ ಹಿಡಿಯುತ್ತಾರೆ. ರೈತರೊಂದಿಗೆ ದರ ನಿಗದಿ ಮಾಡಿಕೊಂಡು ಮುಂಗಡ ಕೇಣಿದಾರರು ಮುಂಗಡ ನೀಡುತ್ತಾರೆ. ಆದ್ರೆ, ಈ ನಡುವೆ, ರೈತರಿಗೆ ಲಾಭ ಬಾರದೇ ಹೋದರು ಕೇಣಿದಾರರು ಹಣ ನೀಡಲೇಬೇಕು. ರೈತರು ಒಪ್ಪಂದದ ಪ್ರಕಾರ ಹಣ ವಸೂಲಿ ಮಾಡುತ್ತಾರೆ. ಹಣ ಕೊಡುವುದು ತಡವಾದರೆ, ಕೇಣಿದಾರರಿಗೆ ಕಪ್ಪು ಪಟ್ಟಿಗೆ ಸೇರಿಸಿ ಮತ್ತೆ ಮುಂದಿನ ವರ್ಷ ಕೇಣಿ ಕೊಡುವುದಿಲ್ಲ. ಇದರಿಂದಾಗಿ ಸತತ ಎರಡು ವರ್ಷದಿಂದ ನಷ್ಟವಾಗುತ್ತಿದೆ’ ಎಂದು ಕಣಿವೆಬಿಳಚಿ ಗ್ರಾಮದ ಕೇಣಿದಾರರೊಬ್ಬರು ಮಾಧ್ಯಮವೊಂದಕ್ಕೆ ಮಾಹಿತಿ ನೀಡಿದ್ದಾರೆ. ಜೂನ್‌ನಿಂದ ಜನವರಿವರೆಗೆ ಅಡಿಕೆ ಕೊಯ್ಲು, ಸಾಗಣೆ, ಹಸಿ ಅಡಿಕೆ ಸುಲಿದು ಬೇಯಿಸುವುದು, ಒಣಗಿಸುವುದು, ಪ್ರತ್ಯೇಕಿಸಿ ಚೀಲ ತುಂಬುವುದಕ್ಕೆ ಅಂದಾಜು 600 ಜನ ಮಹಿಳೆಯರಿಗೆ, 400 ಜನ ಪುರುಷರಿಗೆ ಕೇಣಿದಾರರು ಕೆಲಸ ನೀಡುತ್ತಾರೆ. ಕೇಣಿದಾರರಿಗೆ ಹಾಕಿದ ಬಂಡವಾಳವೂ ದೊರೆಯುತ್ತಿಲ್ಲ’ ಎಂದು ಕೇಣಿದಾರರೊಬ್ಬರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: Gujarat Garba Dance: ನವರಾತ್ರಿ ಗರ್ಬಾ ಡ್ಯಾನ್ಸ್ ಎಫೆಕ್ಟ್- 24 ತಾಸಿನಲ್ಲಿ 10 ಜನರ ಬಲಿ ಪಡೆದ ಹೃದಯಾಘಾತ !!

Follow the ಅಡಿಕೆ ಬೆಳೆಗಾರರ ಚಾನೆಲ್ channel on WhatsApp: https://whatsapp.com/channel/0029Va6CXv17dmeYrgQil235


ಅಡಿಕೆ ಸಿಪ್ಪೆ ಅತ್ಯುತ್ತಮ ಶಬ್ದ ನಿರೋಧಕ

Arecanut

ಅಡಿಕೆ ಬೆಳೆಗಾರರಿಗೆ ಮತ್ತೊಂದು ಸಿಹಿ ಸುದ್ದಿ ಇದೆ. ಅಡಿಕೆಯ ವಿವಿಧ ಬಳಕೆಯ ಬಗ್ಗೆ ಈಗಾಗಲೇ ಹಲವು ಪ್ರಯತ್ನ ನಡೆಯುತ್ತಿದೆ. ಇದೀಗ ಅಡಿಕೆ ಸಿಪ್ಪೆಯ ಬಳಕೆಯಲ್ಲಿ ಇನ್ನೊಂದು ಸಂಶೋಧನಾ ವರದಿ ಬಹಿರಂಗವಾಗಿದೆ. ಶಬ್ದಗಳನ್ನು ತಡೆಯುವಲ್ಲಿಯೂ ಅಡಿಕೆ ಸಿಪ್ಪೆ ಪರಿಣಾಮಕಾರಿಯಾಗಿದೆ ಎಂಬುದನ್ನು ಸುರತ್ಕಲ್ನ ನ್ಯಾಷನಲ್ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಕರ್ನಾಟಕ (NITK) ನಡೆಸಿದ ಸಂಶೋಧನೆಯಿಂದ ತಿಳಿದುಬಂದಿದೆ.

ಅಡಿಕೆ ಬೆಳೆಗಾರರು ಅಡಿಕೆಯ ಸುಲಿದ ನಂತರ ಸಿಪ್ಪೆಯನ್ನು ತ್ಯಾಜ್ಯವಾಗಿ ಬಳಕೆ ಮಾಡುತ್ತಾರೆ. ಅನೇಕರು ಬೆಂಕಿ ಹಾಕಿದರೆ, ಕೆಲವರು ಗೊಬ್ಬರವಾಗಿ ಬಳಕೆ ಮಾಡುತ್ತಾರೆ. ಗೊಬ್ಬರವಾಗಿ ಬಳಕೆ ಮಾಡುವಾಗಲೂ ಹಲವು ವಿಧಾನಗಳನ್ನು ಅನುಸರಿಸಬೇಕಿದೆ. ಅಡಿಕೆ ಸಿಪ್ಪೆಯನ್ನು ಸೊಳ್ಳೆ ನಿಯಂತ್ರಕ ಕಾಯಿಲ್‌ ಆಗಿಯೂ ಬಳಕೆ ಮಾಡುವ ಪ್ರಯತ್ನ ನಡೆದಿದೆ. ಇದೀಗ ಇನ್ನೂ ಒಂದು ಅಧ್ಯಯನ ನಡೆದಿದೆ, ಆಡಿಟೋರಿಯಂ ಅಥವಾ ಮೀಟಿಂಗ್ ಹಾಲ್ನಲ್ಲಿ ಬರುವ ಅನಗತ್ಯ ಶಬ್ದಗಳನ್ನು ತಡೆಯುವಲ್ಲಿಯೂ ಅಡಿಕೆ ಸಿಪ್ಪೆ ಪರಿಣಾಮಕಾರಿಯಾಗಿದೆ ಎಂಬುದನ್ನು ಸುರತ್ಕಲ್ನ ನ್ಯಾಷನಲ್ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (NITK) ಸಂಶೋಧನಾ ವಿದ್ಯಾರ್ಥಿಗಳು ನಡೆಸಿದ ಸಂಶೋಧನೆಯಿಂದ ಬಹಿರಂಗವಾಗಿದೆ.

ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದ ಪ್ರೊ.ಪಿ.ಜಯರಾಜ್ ನೇತೃತ್ವದ ಸಂಶೋಧಕರು ಈ ಸಂಶೋಧನೆಯನ್ನು ನಡೆಸಿದ್ದಾರೆ. ಶಬ್ದ ನಿರೋಧಕ ಬೋರ್ಡ್ಗಳನ್ನು ರಚಿಸುವ ಮೂಲಕ ಶಬ್ದ ನಿರೋಧಕವಾಗಿ ಬಳಕೆ ಮಾಡಬಹುದು ಎಂದು ವರದಿಯಲ್ಲಿ ತಿಳಿಸಿದ್ದಾರೆ. ಅನಗತ್ಯ ಶಬ್ದವನ್ನು ನಿಯಂತ್ರಿಸಲು ಶಬ್ದ ಹೀರಿಕೊಳ್ಳುವ ವಸ್ತುಗಳನ್ನು ಬಳಸಲಾಗುತ್ತದೆ. ಈಗ ಪ್ಲಾಸ್ಟಿಕ್‌ ವಸ್ತುಗಳನ್ನು, ಮಡಕೆ, ಬೋರ್ಡ್‌ ಇತ್ಯಾದಿಗಳ ಬಳಕೆ ಮಾಡಲಾಗುತ್ತದೆ. ಆದರೆ ಅಡಿಕೆಯ ಸಿಪ್ಪೆ ಪರಿಸರ ಸ್ನೇಹಿಯೂ ಆಗಿದ್ದು, ಯಾವುದೇ ಸಮಸ್ಯೆ ಇಲ್ಲ ಎನ್ನುವುದು ವರದಿ.

“ಶಬ್ದ ಫಲಕಗಳನ್ನು ಹೆಚ್ಚು ಪರಿಸರ ಸ್ನೇಹಿ ಮತ್ತು ಜೈವಿಕ ಸಂಯೋಜನೆಯನ್ನಾಗಿ ಮಾಡಲು, ಸಂಸ್ಥೆಯ ವಿದ್ಯಾರ್ಥಿಗಳು ಮತ್ತು ಸಂಶೋಧಕರನ್ನು ಒಳಗೊಂಡ ತಂಡವು ಅಡಿಕೆ ಹೊಟ್ಟನ್ನು ಅನ್ವೇಷಿಸಲು ಪ್ರಾರಂಭಿಸಿತು. ಅದರಂತೆ ಫಲಿತಾಂಶವು ಸಕಾರಾತ್ಮಕವಾಗಿ ಬಂದಿದೆ” ಎಂದು ಜಯರಾಜ್ ಹೇಳಿದ್ದಾರೆ.

Follow the ಅಡಿಕೆ ಬೆಳೆಗಾರರ ಚಾನೆಲ್ channel on WhatsApp: https://whatsapp.com/channel/0029Va6CXv17dmeYrgQil235

ಮಂಗಳವಾರ, ಅಕ್ಟೋಬರ್ 24, 2023

ಅಡಿಕೆ ತೋಟ ಯಾವಾಗಲೂ ಆರೋಗ್ಯವಾಗಿರಬೇಕು ಎಂದರೆ ಈ ಕೆಲಸ ಮಾಡೋದು ಮರೆಯಬೇಡಿ

Agriculture: ಒಬ್ಬ ರೈತನಿಗೆ ಅಡಿಕೆ ತೋಟ ಇದ್ದರೆ ಹೆಚ್ಚಿನ ಲಾಭ ಗಳಿಸಲು ಎನ್ನುತ್ತಾರೆ. ರೈತನ 5 ಎಕರೆ ಅಡಿಕೆ ತೋಟವಿದ್ದರೆ ಆತನ ನಿವ್ವಳ ಆದಾಯ 10 ಲಕ್ಷ ರೂ. ಎಂದು ಪರಿಗಣಿಸ ಬಹುದು. ಹಾಗಿದ್ರೆ ಇದರ ಖರ್ಚು ಯಾವ ರೀತಿ ಇರುತ್ತೆ? ಖರ್ಚು ಎಂಬುದು ಆಯಾಯ ರೈತರ ಕೃಷಿ ವಿಧಾನದ ಮೇಲೆ ಅವಲಂಭಿಕೆ ಆಗಿರುತ್ತದೆ. ತೋಟ ವನ್ನು ಸರಿಯಾಗಿ ನಿರ್ವಹಣೆ ಮಾಡಿದ್ರೆ ಖರ್ಚು ಕಮ್ಮಿಯೆ ಎಂದು ಹೇಳಬಹುದು.ಅಡಿಕೆ ತೋಟಕ್ಕೆ ಸರಿಪ್ರಮಾಣದ ಮಣ್ಣು, ನೀರು, ಪೋಷಣೆ ಸಿಕ್ಕರೆ ಹೆಚ್ಚು ಆದಾಯ ಬೇರೆ ಯಾವ ಬೆಳೆಯಲ್ಲಿಯೂ ಬರಲು ಸಾಧ್ಯವೇ ಇಲ್ಲ.

ಏನು ಮಾಡಬೇಕು?

ಅಡಿಕೆ ತೋಟದಲ್ಲಿ ಹೆಚ್ಚಿನ ಫಸಲು ಸಿಗಬೇಕಾದರೆ ಸರಿಯಾದ ನೀರು ಪೂರೈಕೆ ಆಗಬೇಕು, ಗಾಳಿ, ಬೆಳಕು ಸರಿಯಾಗಿ ಬೀಳಬೇಕು. ಮುಖ್ಯವಾಗಿ ಅಲ್ಲೆ ಬೀಳುವ ಕಸ ಕಡ್ಡಿ, ಹಾಳೆ ಇತ್ಯಾದಿಗಳನ್ನು ಗೊಬ್ಬರವಾಗಿ ಮಣ್ಣಿನ ಸೇರುವಂತೆ ಮಾಡಬೇಕು. ರಸಾಯನಿಕ ಗೊಬ್ಬರ ಬಳಸಲೇ ಬಾರದು. ಸಾವಯವ ಗೊಬ್ಬರ ಹಾಕುವ ಮೂಲಕ ನಿಮ್ಮ ತೋಟವನ್ನು ಆರೋಗ್ಯ ಕರವಾಗಿ ಇಡಬಹುದಾಗಿದೆ.

ಹರಳು ಉದುರುವಿಕೆ ಯಾಕೆ?

ಕೆಲವು ತೋಟಗಳಲ್ಲಿ ನೀರಿನ ತೇವಾಂಶ ಹೆಚ್ಚಾದರೂ ಹರಳು ಉದುರುವಿಕೆ ಉಂಟಾಗುತ್ತದೆ. ತೋಟಗಳಲ್ಲಿ ಶೀತದ ವಾತಾವರಣ ದಿಂದ ಹರಳು ಉದುರುವ ಬಾಧೆ ಕಂಡು ಬರುತ್ತದೆ. ಒಂದು‌ ವೇಳೆ ಅಡಿಕೆ ಗಿಡದ ಎಲೆಗಳು ಹಳದಿ ಬಣಕ್ಕೆ ತಿರುಗಿದರೆ, ಕ್ಯಾಲ್ಸಿಯಂ ನೈಟ್ರೇಟ್ಆನ್ನು ನೀರಿಗೆ ಬೆರೆಸಿ ಸಿಂಪಡಿಸಬಹುದು. ಹರಳು ಉದುರುವಿಕೆಗೆ ನೀರು ಬಸಿಯದ ತೋಟಗಳಲ್ಲಿ ಕಾಲುವೆಗಳನ್ನು ಮಾಡಿ, ತೋಟದ ಸುತ್ತಲೂ ನಿಂತ ನೀರು ಕಾಲುವೆಗಳನ್ನು ಸ್ವಚ್ಚಗೊಳಿಸುವುದು ಮಾಡಬೇಕು.

ಇಳುವರಿ ಹೆಚ್ಚು.

ನೀವು ಅಡಿಕೆ ಗಿಡಗಳನ್ನು ಪ್ರೀತಿಯಿಂದ ನೋಡಿಕೊಳ್ಳುವುದು ಮುಖ್ಯ, ಅದ್ರೆ ಅಡಿಕೆ ಗಿಡಗಳು ಆರೋಗ್ಯ ವಾಗಿಡಲು ಗಿಡಕ್ಕೆ ಅನುಗುಣವಾದ ಪೋಷಕಾಂಶ ಗಳನ್ನು ನೀಡುವುದು. ಮನೆಯಲ್ಲಿಯೇ ಮಾಡಿದ ಗೊಬ್ಬರ ಹಾಕುವುದು.ನೀರು ನಿಲ್ಲದಂತೆ ನೋಡಿಕೊಳ್ಳುವುದು ಇತ್ಯಾದಿ ಮಾಡಿದ್ರೆ ಹೆಚ್ಚಿನ ಇಳುವರಿ ಕಾಣಲು ಸಾಧ್ಯ.

Follow the ಅಡಿಕೆ ಬೆಳೆಗಾರರ ಚಾನೆಲ್ channel on WhatsApp: https://whatsapp.com/channel/0029Va6CXv17dmeYrgQil235